ನಾರ್ತಾಂಪ್ಟನ್: ನಾತಾಂಪ್ಟನ್‌ಶೈರ್ ವಿರುದ್ಧದ ಟಿ20 ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 8 ವಿಕೆಟಿಗೆ 149 ರನ್ ಗಳಿಸಿದೆ.
Advertisement
ಅಗ್ರ ಕ್ರಮಾಂಕ ತೀವ್ರ ಕುಸಿತಕ್ಕೆ ಸಿಲುಕಿದ ಬಳಿಕ ಹರ್ಷಲ್ ಪಟೇಲ್ ಅರ್ಧ ಶತಕವೊಂದನ್ನು ಬಾರಿಸಿ ತಂಡದ ನೆರವಿಗೆ ನಿಂತರು.
ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಖಾತೆ ತೆರೆಯಲು ವಿಫಲರಾದರು. ಇಶಾನ್ ಕಿಶನ್ 16, ರಾಹುಲ್ ತ್ರಿಪಾಠಿ 7, ನಾಯಕ ದಿನೇಶ್ ಕಾರ್ತಿಕ್ 34, ವೆಂಕಟೇಶ್ ಅಯ್ಯರ್ 20 ರನ್ ಹೊಡೆದರು. ಹರ್ಷಲ್ ಪಟೇಲ್ ಗಳಿಕೆ 36 ಎಸೆತಗಳಿಂದ 54 ರನ್. ಸಿಡಿಸಿದ್ದು 5 ಫೋರ್ ಹಾಗೂ 3 ಸಿಕ್ಸರ್.