Advertisement

ಡ್ವೇನ್ ಬ್ರಾವೊ ದಾಖಲೆ ಮುರಿಯುವ ಸನಿಹದಲ್ಲಿ ಆರ್ ಸಿಬಿ ಹೀರೋ ‘ಪರ್ಪಲ್ ಪಟೇಲ್’

10:11 AM Sep 30, 2021 | Team Udayavani |

ದುಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸುಲಭ ಜಯ ಸಾಧಿಸಿದೆ. ಈ ಮೂಲಕ ಪ್ಲೇ ಆಫ್ ಸನಿಹಕ್ಕೆ ವಿರಾಟ್ ಪಡೆ ಬಂದು ನಿಂತಿದೆ.

Advertisement

ಟಾಸ್ ಗೆದ್ದು ಬೌಲಿಂಗ್ ಮಾಡುವ ವಿರಾಟ್ ನಿರ್ಧಾರವನ್ನು ಪ್ರಶ್ನಿಸುವಂತೆ ಮೊದಲ 10 ಓವರ್ ಗಳಲ್ಲಿ ರಾಜಸ್ಥಾನ್ ರಾಯಲ್ಸ್ ಆಟಗಾರರು ಬ್ಯಾಟಿಂಗ್ ಮಾಡಿದರು. ಎವಿನ್ ಲೆವಿಸ್ ಮತ್ತು ಯಶಸ್ವಿ ಜೈಸ್ವಾಲ್ ಸ್ಪೋಟಕ ಬ್ಯಾಟಿಂಗ್ ಮಾಡಿದರು. 11 ಓವರ್ ನಲ್ಲಿ ನೂರು ರನ್ ಗಳಿಸಿದ್ದ ರಾಜಸ್ಥಾನ್ ನಂತರ ರನ್ ಗಳಿಸಲು ಪರದಾಡಿತು. ಆರ್ ಸಿಬಿ ಬೌಲರ್ ಗಳಾದ ಯುಜಿ ಚಾಹಲ್, ಹರ್ಷಲ್ ಪಟೇಲ್, ಶಹಬಾಜ್ ಅಹಮದ್ ಉತ್ತಮ ಬೌಲಿಂಗ್ ದಾಳಿ ನಡೆಸಿದರು.

ಮುಂಬೈ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ದ ಹರ್ಷಲ್ ಪಟೇಲ್, ರಾಜಸ್ಥಾನ ವಿರುದ್ಧವೂ ಮೂರು ವಿಕೆಟ್ ಪಡೆದರು. ಮೊದಲ ಮೂರು ಓವರ್ ನಲ್ಲಿ ದುಬಾರಿಯಾಗಿದ್ದ ಹರ್ಷಲ್ ಅಂತಿಮ ಓವರ್ ನಲ್ಲಿ ವಿಕೆಟ್ ಪಡೆದರು. ಈ ಮೂಲಕ ಈ ಐಪಿಎಲ್ ನಲ್ಲಿ ತಮ್ಮ ವಿಕೆಟ್ ಬೇಟೆಯನ್ನು 26ಕ್ಕೆ ವಿಸ್ತರಿಸಿದರು.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಮತ್ತೆ ಒಡಕು: ಕೊಹ್ಲಿ ವಿರುದ್ಧ ದೂರು ನೀಡಿದ ಮತ್ತಿಬ್ಬರು ಆಟಗಾರರು

ಒಂದು ಐಪಿಎಲ್ ಸೀಸನ್ ನಲ್ಲಿ ಆರ್ ಸಿಬಿ ಪರ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಹರ್ಷಲ್ ಪಟೇಲ್ ಬುಧವಾರ ಮಾಡಿದರು (26). ಈ ಹಿಂದೆ ಯುಜಿ ಚಾಹಲ್ ರ 23 ವಿಕೆಟ್ ಸಾಧನೆಯನ್ನು ಹರ್ಷಲ್ ಮುರಿದರು. ಇದೇ ಸಮಯದಲ್ಲಿ ಭಾರತ ರಾಷ್ಟ್ರೀಯ ತಂಡದ ಪರ ಆಡದ ಆಟಗಾರರ ಪೈಕಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಸಾಧನೆಯೂ ಹರ್ಷಲ್ ಹೆಸರಿಗಿದೆ.

Advertisement

ಇದೇ ವೇಳೆ ಡ್ವೇನ್ ಬ್ರಾವೋ ಅವರ ದಾಖಲೆಯೊಂದನ್ನು ಮುರಿಯುವ ಸುವರ್ಣಾವಕಾಶವೂ ಹರ್ಷಲ್ ಮುಂದಿದೆ. ಒಂದು ಸೀಸನ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಸಿಎಸ್ ಕೆ ಬೌಲರ್ ಬ್ರಾವೋ ಮಾಡಿದ್ದರು. ಅವರು 2013ರ ಆವೃತ್ತಿಯಲ್ಲಿ 32 ವಿಕೆಟ್ ಕಬಳಿಸಿದ್ದರು. ಸದ್ಯ ಹರ್ಷಲ್ ಪಟೇಲ್ 26 ವಿಕೆಟ್ ಪಡೆದಿದ್ದು, ಲೀಗ್ ಹಂತದಲ್ಲಿ ಇನ್ನೂ ಮೂರು ಪಂದ್ಯಗಳು ಬಾಕಿ ಉಳಿದಿದೆ. ಪ್ಲೇ ಆಫ್ ಗೆ ಪ್ರವೇಶ ಬಹುತೇಕ ಖಚಿತವಾಗಿರುವ ಕಾರಣ ಕನಿಷ್ಠ ಒಂದು ಪಂದ್ಯವಾದರೂ ಹೆಚ್ಚುವರಿಯಾಗಿ ಸಿಗುತ್ತದೆ. ಹೀಗಾಗಿ ಹರ್ಷಲ್ ಪಟೇಲ್ ಅವರು ಬ್ರಾವೋ ದಾಖಲೆ ಮುರಿಯುವ ಅವಕಾಶವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next