ಬೆಂಗಳೂರು: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಮೂವರು ಶಿವಮೊಗ್ಗದವರು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸೋಮವಾರ ಹೇಳಿಕೆ ನೀಡಿದ್ದಾರೆ.
ಶಕ್ತಿಭವನದಲ್ಲಿ ಮುಖ್ಯಮಂತ್ರಿ ಗಳನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆ ಬಗ್ಗೆ ಸಿಎಂಗೆ ವಿವರಣೆ ಕೊಟ್ಟಿದ್ದೇನೆ ಮತ್ತೆ ಸಭೆ ಸೇರೋಣ ಅಂತಾ ಸಿಎಂ ಹೇಳಿದ್ದಾರೆ ಎಂದರು.
ಬಂಧಿತ ಮೂರು ಜನರು ಶಿವಮೊಗ್ಗದವರು. ಇಬ್ಬರ ಬಗ್ಗೆ ಶೋಧ ನಡೆಯುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶಾಲಾ ಕಾಲೇಜು ಆರಂಭ ವಿಚಾರ ಸಂಬಂಧಿಸಿ ಪ್ರತಿಕ್ರಿಯಿಸಿ, ಪರಿಸ್ಥಿತಿ ನೋಡಿಕೊಂಡು ಡಿಸಿ ನಿರ್ಧಾರ ತಗೆದುಕೊಳ್ಳಲಿದ್ದಾರೆ ಎಂದರು.
ಶವಯಾತ್ರೆ ವೇಳೆ ಕಲ್ಲಿತೂರಾಟ ನಡೆಸಿದ ಪ್ರಕರಣಡಾ ಕುರಿತು ಪ್ರತಿಕ್ರಿಯಿಸಿ ಪೊಲೀಸರು ಸಂಯಮದಿಂದ ವರ್ತಿಸಿದ್ದಾರೆ.ತಾಳ್ಮೆ ವಹಿಸಿದ್ದು ಸಂಯಮ ಮೀರಿ ವರ್ತಿಸಿ ಫೈರಿಂಗ್ ಮತ್ತು ಲಾಠಿ ಚಾರ್ಜ್ ಮಾಡಿದರೆ ಇನ್ನೂ ನಾಲ್ಕು ಹೆಣಗಳು ಬೀಳುತ್ತಿದ್ದವು ಎಂದರು.