Advertisement

ಇಂಗ್ಲೆಂಡ್‌ ಏಕದಿನ ತಂಡದಿಂದ ಟಿ20 ಬ್ಲಾಸ್ಟ್‌ ತಂಡಕ್ಕೆ

11:44 PM Jul 15, 2022 | Team Udayavani |

ಲಂಡನ್‌: ಇಂಗ್ಲೆಂಡ್‌ ಏಕದಿನ ತಂಡದ ಮೂವರು ಆಟಗಾರರನ್ನು ಟಿ20 ಬ್ಲಾಸ್ಟ್‌ ಪಂದ್ಯಗಳಿಗಾಗಿ ಬಿಡುಗಡೆ ಗೊಳಿಸಲಾಗಿದೆ. ಇವರೆಂದರೆ ಹ್ಯಾರಿ ಬ್ರೂಕ್‌, ಫಿಲ್‌ ಸಾಲ್ಟ್ ಮತ್ತು ಮ್ಯಾಟ್‌ ಪಾರ್ಕಿನ್ಸನ್‌.

Advertisement

ಟಿ20 ಬ್ಲಾಸ್ಟ್‌ ಕೂಟದ 2 ಸೆಮಿ ಫೈನಲ್‌ ಮತ್ತು ಫೈನಲ್‌ ಜು. 16ರ ಶನಿವಾರ ನಡೆಯಲಿದೆ. ಇದು ಮುಗಿದ ಬೆನ್ನಲ್ಲೇ ಈ 3 ಆಟಗಾರರು ಇಂಗ್ಲೆಂಡ್‌ ತಂಡವನ್ನು ಕೂಡಿಕೊಳ್ಳಲಿದ್ದಾರೆ.

“ಶುಕ್ರವಾರ ಮೂವರೂ ತಮ್ಮ ತಂಡ ಗಳನ್ನು ಸೇರಿಕೊಳ್ಳಲು ಎಜ್‌ಬಾಸ್ಟನ್‌ಗೆ ತೆರಳಿದ್ದಾರೆ. ಈ ಪಂದ್ಯಗಳನ್ನು ಪೂರೈಸಿ ರವಿವಾರದ ಏಕದಿನ ಪಂದ್ಯಕ್ಕಾಗಿ ಮರಳಿ ಇಂಗ್ಲೆಂಡ್‌ ತಂಡವನ್ನು ಸೇರಿಕೊಳ್ಳುವರು’ ಎಂದು ಇಸಿಬಿ ಪ್ರಕಟಿಸಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next