Advertisement

ಹರಪನಹಳ್ಳಿ: 24ರಂದು ಬೃಹತ್‌ ಉದ್ಯೋಗ ಮೇಳ

05:51 PM Sep 08, 2022 | Team Udayavani |

ಹರಪನಹಳ್ಳಿ: ಶಂಕರನಹಳ್ಳಿ ಡಾ| ಭೀಮಪ್ಪ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಹಾಗೂ ಅಕ್ಷರ ಫೌಂಡೇಶನ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ನೇತೃತ್ವದಲ್ಲಿ ಸೆ. 24ರಂದು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಓಬಿಸಿ ಘಟಕದ ಉಪಾಧ್ಯಕ್ಷ ಶಂಕರನಹಳ್ಳಿ ಡಾ| ಉಮೇಶ್‌ ಬಾಬು ತಿಳಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಂಜುಂಡಪ್ಪ ವರದಿ ಅನ್ವಯ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಹರಪನಹಳ್ಳಿ ಕೂಡ ಒಂದಾಗಿದ್ದು, ತಾಲೂಕಿನಲ್ಲಿ ಸಾಕಷ್ಟು ನಿರುದ್ಯೋಗ ಸಮಸ್ಯೆ ಇದ್ದು, ತಾಲೂಕಿನ ಬಹುತೇಕ ಹಳ್ಳಿಗಳಿಗೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಅನೇಕ ಯುವಕರು ವಿದ್ಯಾಭ್ಯಾಸ ಮುಗಿಸಿಕೊಂಡು ಮನೆಯಲ್ಲಿ ಕುಳಿತಿರುವುದನ್ನು ಗಮನಿಸಿ ಇದಕ್ಕೆ ಪರಿಹಾರ ಹುಡುಕುವ ಯೋಚನೆ ಮಾಡಿದಾಗ ಅಕ್ಷರ ಫೌಂಡೇಶನ್‌ ಅವರನ್ನು ಸಂಪರ್ಕಿಸಿ ಚರ್ಚಿಸಿದಾಗ ಇದಕ್ಕೆ ಅವರು ಸ್ಪಂದಿಸಿ ನಿಮ್ಮ ತಾಲೂಕಿನಲ್ಲಿ ಉದ್ಯೋಗ ಮೇಳ ನಡೆಸಿಕೊಡಲಾಗುವುದೆಂದು ಭರವಸೆ
ನೀಡಿದ ಹಿನ್ನೆಲೆಯಲ್ಲಿ ಈ ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.

ಈ ಉದ್ಯೋಗ ಮೇಳಕ್ಕೆ ತಾಲೂಕಿನ ನಿರುದ್ಯೋಗ ಯುವಕ-ಯುವತಿಯರು ಭಾಗವಹಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು. ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಶಿವಯೋಗಿ ಮಾತನಾಡಿ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇದುವರೆಗೂ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಆಗುತ್ತಿಲ್ಲ.

ನಮ್ಮ ಪಕ್ಷದ ಅಡಿಯಲ್ಲಿ ಮುಖಂಡ ಉಮೇಶ ಬಾಬು ಅವರು ಅಯೋಜಿಸಿರುವ ಈ ಉದ್ಯೋಗ ಮೇಳವು ತಾಲೂಕಿನ ಯುವಕರಿಗೆ ಅನುಕೂಲವಾಗಲಿದೆ. ಈ ಉದ್ಯೋಗ ಮೇಳಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಈಶ್ವರ ಕಂಡ್ರೆ ಜಿಲ್ಲೆಯ ಎಲ್ಲ ಹಾಲಿ, ಮಾಜಿ ಶಾಸಕರುಗಳು ಬರುವ ನಿರೀಕ್ಷೆ ಇದ್ದು, ಅದೇ ರೀತಿ ಕ್ಷೇತ್ರದ ಎಲ್ಲ ಕಾಂಗ್ರೆಸ್‌ ಆಕಾಂಕ್ಷಿಗಳು, ಮುಖಂಡರು ಭಾಗವಹಿಸಬೇಕೆಂದು ಕರೆ ನೀಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕ್ಷೇತ್ರದ ಚುನಾವಣೆ ಉಸ್ತುವಾರಿ ಕವಿತಾರೆಡ್ಡಿ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ಇದರ ಬಗ್ಗೆ ಗಮನಹರಿಸದೇ ಕೇಂದ್ರ ಬಿಜೆಪಿ ಸರ್ಕಾರ ಜನಸಾಮಾನ್ಯರ ಮೇಲೆ ಅಗತ್ಯ ವಸ್ತುಗಳ ಮತ್ತು ಜಿಎಸ್‌ಟಿ ದರ ಏರಿಸುವುದೇ ಇವರ ಸಾಧನೆಯಾಗಿದೆ. ಇಂದು ಶೇ.8.1ರಷ್ಟು ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ.

Advertisement

ತಾತ್ಕಾಲಿಕವಾಗಿ ಅಗ್ನಿಪಥ್‌ ಮೂಲಕ ಯುವಕರನ್ನು ನೇಮಕ ಮಾಡಿಕೊಂಡು ನಂತರ ಅವರನ್ನು ಸಂಪೂರ್ಣ ನಿರುದ್ಯೋಗಿಗಳನ್ನಾಗಿ ಮಾಡುವ ಹುನ್ನಾರ ನಡೆದಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಮುಂದೆ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್‌ ಅಧಿ ಕಾರಕ್ಕೆ ಬಂದರೆ ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ನಿರಂತರವಾಗಿ ಉದ್ಯೋಗ ಮೇಳ ಆಯೋಜಿಸುವ ಮೂಲಕ ನಿರುದ್ಯೋಗ ಸಮಸ್ಯೆ ಇತ್ಯರ್ಥಕ್ಕೆ ನಾಂದಿ ಹಾಡುತ್ತೇವೆ ಎಂದರು.

ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಲೂರು ಅಂಜಪ್ಪ ಮಾತನಾಡಿ, ನಮ್ಮ ಪಕ್ಷದ ಅಡಿಯಲ್ಲಿ ಉಮೇಶ್‌ ಬಾಬುರವರು ಇಂತಹ ಉದ್ಯೋಗ ಮೇಳವನ್ನು ಆಯೋಜಿಸುವುದು ಶ್ಲಾಘನೀಯ. ಇದರಿಂದ ತಾಲೂಕಿನ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಅಕ್ಷರ ಪೌಂಢೇಶನ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕುಮಾರ್‌ ಉಪ್ಪಾರ್‌ ಮಾತನಾಡಿ, ಈ ಉದ್ಯೋಗ ಮೇಳದಲ್ಲಿ 80ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿದ್ದು, ಸುಮಾರು 5000ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೀಡಲಿದ್ದು, ಈ ಮೇಳದಲ್ಲಿ ಆಯ್ಕೆಯಾದವರಿಗೆ ಸ್ಥಳದಲ್ಲೇ ಆದೇಶ ಪತ್ರ ನೀಡಲಾಗುವುದು. ಈ ಉದ್ಯೋಗ ಮೇಳಕ್ಕೆ ಭಾಗವಹಿಸುವ ಯುವಕರು ತಮ್ಮ ಮೂಲ ಅಂಕಪಟ್ಟಿ ಝರಾಕ್ಸ್‌ ಮತ್ತು ಆಧಾರ್‌ಕಾರ್ಡ್‌ ಇತರೆ ದಾಖಲಾತಿಯೊಂದಿಗೆ ಆಗಮಿಸಬೇಕು. ಈ ಮೇಳಕ್ಕೆ ವಯೋಮಿತಿ 18ರಿಂದ 33 ವರ್ಷಗಳು ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ರಮೇಶ್‌ ಮೊ.ನಂ: 7619197742, ಮಂಜು 8722021267, ಶಶಿ
9900239953 ಸಂಪರ್ಕಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ತಿಮ್ಮಪ್ಪ, ಶಂಕರನಹಳ್ಳಿ ಹನುಮಂತಪ್ಪ, ರಾಜು, ಅಲಮರಸೀಕೆರೆ ರಮೇಶ, ಮಂಜುನಾಥ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next