ಹರಪನಹಳ್ಳಿ: ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಪ್ರತ್ಯೇಕವಾಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಪನಹಳ್ಳಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಭವ್ಯ(38), ಕಾವ್ಯ(17) ಅಮೂಲ್ಯ(13) ನೇಣಿಗೆ ಶರಣಾದ ತಾಯಿ ಮಕ್ಕಳು. ಮೃತ ಭವ್ಯಳ ಪತಿ ವಿರೇಶ ಅವರು ಅಡುಗೆ ಮತ್ತು ಪೇಂಟಿಂಗ್ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು ಕಳೆದ ಮೂರು ದಿನಗಳಿಂದ ಊರಲ್ಲಿ ಇರಲಿಲ್ಲ ಎನ್ನಲಾಗಿದೆ, ಇಬ್ಬರು ಹೆಣ್ಣು ಮಕ್ಕಳು ನಮ್ಮ ಸಾವಿಗೆ ಯಾರು ಕಾರಣರಲ್ಲ ಎಂದು ಚೀಟಿ ಬರೆದಿದ್ದಾರೆ ಎಂದು ಹೇಳಲಾಗಿದೆ.
ಮನೆಯ ಮುಂಬಾಗಿಲು ಬೀಗ ಹಾಕಿಕೊಂಡು ಹಿಂಬಾಗಿಲ ಕದ ಮುಚ್ಚಿಕೊಂಡು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದ್ದು, ಮಧ್ಯಾಹ್ನ ಅಕ್ಕ ಪಕ್ಕದವರ ಗಮನಕ್ಕೆ ಬಂದಿದೆ.
ಕಾವ್ಯ ಪಿಯುಸಿ, ಹಾಗೂ ಅಮೂಲ್ಯ 9 ನೇ ತರಗತಿ ಓದುತ್ತಿದ್ದರು ಎಂದು ತಿಳಿದು ಬಂದಿದೆ. ಕಠಿಣ ನಿರ್ದಾರ ತಳೆಯಲು ನಿಖರ ಕಾರಣ ತಿಳಿದು ಬಂದಿಲ್ಲ, ಹರಪನಹಳ್ಳಿ ಪಟ್ಟಣದ ಪೋಲೀಸ್ ಠಾಣೆಯಲ್ಲಿ ಪಿಎಸ್‌ಐ ಪ್ರಕಾಶ ರವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.