Advertisement

ರ್‍ಯಾಂಕಿಂಗ್‌: 5ನೇ ಸ್ಥಾನಕ್ಕೆ ಜಿಗಿದ ಹರ್ಮನ್‌ಪ್ರೀತ್‌ ಕೌರ್‌

12:05 AM Sep 28, 2022 | Team Udayavani |

ಹೊಸದಿಲ್ಲಿ: ಇಂಗ್ಲೆಂಡ್‌ ವಿರು ದ್ಧದ ಸರಣಿಯನ್ನು 3-0 ಅಂತರದಿಂದ ಕ್ಲೀನ್‌ ಸ್ವೀಪ್‌ ಗೈದ ಸಾಧನೆಯಿಂದ ಭಾರತೀಯ ವನಿತಾ ಆಟಗಾರರು ವೈಯ ಕ್ತಿಕವಾಗಿ ತಮ್ಮ ರ್‍ಯಾಂಕಿಂಗ್‌ ಅನ್ನು ಉತ್ತಮ ಪಡಿಸಿಕೊಂಡಿದ್ದಾರೆ. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮತ್ತು ಸ್ಮತಿ ಮಂದನಾ ಉತ್ತಮ ಸ್ಥಾನಕ್ಕೇರಿದ ಪ್ರಮುಖ ಆಟಗಾರ್ತಿಯರಾಗಿದ್ದಾರೆ.

Advertisement

ಕ್ಯಾಂಟರ್‌ಬರಿಯಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 111 ಎಸೆತಗಳಿಂದ ಅಜೇಯ 143 ರನ್‌ ಸಿಡಿಸಿದ ಸಾಧನೆಯಿಂದ ಹರ್ಮನ್‌ಪ್ರೀತ್‌ ಕೌರ್‌ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ನಾಲ್ಕು ಸ್ಥಾನ ಮೇಲಕ್ಕೇರಿದ್ದು ಐದನೇ ಸ್ಥಾನ ಪಡೆದಿದ್ದಾರೆ. ಸರಣಿಯ ಎರಡು ಪಂದ್ಯಗಳಲ್ಲಿ ಅನುಕ್ರಮವಾಗಿ 40 ಮತ್ತು 50 ರನ್‌ ಗಳಿಸಿದ್ದ ಆರಂಭಿಕ ಆಟಗಾರ್ತಿ ಸ್ಮತಿ ಮಂದನಾ ಒಂದು ಸ್ಥಾನ ಮೇಲಕ್ಕೇರಿದ್ದು ಆರನೇ ಸ್ಥಾನ ಪಡೆದಿದ್ದಾರೆ.

ಲಾರ್ಡ್ಸ್‌ನಲ್ಲಿ ನಡೆದ ಸರಣಿಯ ಮೂರನೇ ಪಂದ್ಯದಲ್ಲಿ ಅಜೇಯ 68 ರನ್‌ ಗಳಿಸಿ ಕುಸಿದ ತಂಡವನ್ನು ಆಧರಿಸಿದ್ದ ದೀಪ್ತಿ ಶರ್ಮ ಎಂಟು ಸ್ಥಾನ ಮೇಲಕ್ಕೇರಿದ್ದು 24ನೇ ಸ್ಥಾನ ಪಡೆದಿದ್ದಾರೆ. ಪೂಜಾ ವಸ್ತ್ರಾಕರ್‌ ಮತ್ತು ಹಲೀìನ್‌ ದಿಯೋಲ್‌ ಬ್ಯಾಟಿಂಗ್‌ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆದ ಇನ್ನಿತರ ಆಟಗಾರ್ತಿಯರಾಗಿದ್ದಾರೆ.

ಜೂಲನ್‌ ಐದನೇ ಸ್ಥಾನ
ಸರಣಿಯ ಎರಡು ಪಂದ್ಯಗಳಲ್ಲಿ ತಲಾ 4 ವಿಕೆಟ್‌ ಪಡೆದ ರೇಣುಕಾ ಸಿಂಗ್‌ 35 ಸ್ಥಾನ ಮೇಲಕ್ಕೇರಿದ್ದು 35ನೇ ಸ್ಥಾನ ಪಡೆದಿದ್ದಾರೆ. ವಿದಾಯ ಸರಣಿಯಲ್ಲಿ ಆಡಿದ ವೇಗಿ ಜೂಲನ್‌ ಗೋಸ್ವಾಮಿ ಐದನೇ ಸ್ಥಾನದೊಂದಿಗೆ ನಿವೃತ್ತಿಯಾಗಿದ್ದಾರೆ. ಆಲ್‌ರೌಂಡರ್‌ ಪಟ್ಟಿಯಲ್ಲಿ ವೆಸ್ಟ್‌ಇಂಡೀಸ್‌ನ ನಾಯಕಿ ಹೇಲೆ ಮ್ಯಾಥ್ಯೂಸ್‌ ನಂ. ವನ್‌ ಸ್ಥಾನವನ್ನು ಅಲಂಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next