Advertisement

ವನಿತಾ ಪ್ರೀಮಿಯರ್‌ ಲೀಗ್‌: ಮುಂಬೈಗೆ 143 ರನ್‌ ಬೃಹತ್‌ ಗೆಲುವು

11:41 PM Mar 04, 2023 | Team Udayavani |

ಮುಂಬಯಿ: ಮುಂಬೈ ಇಂಡಿಯನ್ಸ್‌ ಬೃಹತ್‌ ಜಯಭೇರಿಯೊಂದಿಗೆ ಪ್ರಥಮ ವನಿತಾ ಪ್ರೀಮಿ ಯರ್‌ ಲೀಗ್‌ ಪಂದ್ಯಾವಳಿಗೆ ಚಾಲನೆ ನೀಡಿದೆ.

Advertisement

ಏಕಪಕ್ಷೀಯ ಪಂದ್ಯದಲ್ಲಿ ಅದು ಗುಜರಾತ್‌ ಜೈಂಟ್ಸ್‌ಗೆ 143 ರನ್ನುಗಳ ಸೋಲುಣಿಸಿತು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್‌ 5 ವಿಕೆಟಿಗೆ 207 ರನ್‌ ರಾಶಿ ಹಾಕಿದರೆ, ಗುಜರಾತ್‌ ಜೈಂಟ್ಸ್‌ ಶೋಚನೀಯ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿ 15.1 ಓವರ್‌ಗಳಲ್ಲಿ ಕೇವಲ 64 ರನ್ನಿಗೆ ಆಲೌಟಾಯಿತು. ಸೈಕಾ ಇಸಾಕ್‌ 11 ರನ್ನಿಗೆ 4 ವಿಕೆಟ್‌ ಕಿತ್ತು ಗುಜರಾತ್‌ ತಂಡದ ಕುಸಿತಕ್ಕೆ ಕಾರಣರಾದರು.

ಕೌರ್‌, ಮ್ಯಾಥ್ಯೂಸ್‌ ಆಕರ್ಷಣೆ
ಓಪನರ್‌ ಹ್ಯಾಲಿ ಮ್ಯಾಥ್ಯೂಸ್‌ ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಬಿರುಸಿನ ಆಟ ಮುಂಬೈ ಸರದಿಯ ಆಕರ್ಷಣೆ ಆಗಿತ್ತು.

ಮತ್ತೋರ್ವ ಓಪನರ್‌ ಯಾಸ್ತಿಕಾ ಭಾಟಿಯಾ (1) ಯಶಸ್ಸು ಕಾಣಲಿಲ್ಲ. ಆದರೆ ಹ್ಯಾಲಿ ಮ್ಯಾಥ್ಯೂಸ್‌ ಅಬ್ಬರಿಸಿ ದರು. 31 ಎಸೆತಗಳಿಂದ 47 ರನ್‌ ಹೊಡೆದರು. ಇದು 4 ಸಿಕ್ಸರ್‌, 3 ಬೌಂಡರಿಗಳನ್ನು ಒಳಗೊಂಡಿತ್ತು. ಕೌರ್‌ ಕೇವಲ 30 ಎಸೆತಗಳಿಂದ 65 ರನ್‌ ಚಚ್ಚಿದರು. ಸಿಡಿಸಿದ್ದು 14 ಫೋರ್‌. ಮೋನಿಕಾ ಪಟೇಲ್‌ ಅವರ ಒಂದೇ ಓವರ್‌ನಲ್ಲಿ 5 ಬೌಂಡರಿ ಬಾರಿಸುವ ಮೂಲಕ ಕೌರ್‌ ಧಾರಾಳ ರಂಜನೆ ಒದಗಿಸಿದರು.

Advertisement

ಅಮೇಲಿಯಾ ಕೆರ್‌ ಕೂಡ ಆಕರ್ಷಕ ಬ್ಯಾಟಿಂಗ್‌ ನಡೆಸಿದರು. ಅವರ ಕೊಡುಗೆ ಅಜೇಯ 45 ರನ್‌ (24 ಎಸೆತ, 6 ಬೌಂಡರಿ, 1 ಸಿಕ್ಸರ್‌). ಐಸಿ ಲಾಂಗ್‌ ಪಂದ್ಯದ ಅಂತಿಮ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿದರು.

ಗುಜರಾತ್‌ನ ಅಗ್ರ ಕ್ರಮಾಂಕದ ಐವರಲ್ಲಿ ಮೂವರು ಖಾತೆಯನ್ನೇ ತೆರೆಯಲಿಲ್ಲ. ಕುಸಿತ ಎಷ್ಟು ತೀವ್ರವಾಗಿತ್ತೆಂದರೆ, 23 ರನ್‌ ಆಗುವಷ್ಟರಲ್ಲಿ 7 ಮಂದಿ ಪೆವಿಲಿಯನ್‌ ಸೇರಿ ಆಗಿತ್ತು.

ಮೊದಲಿಗರು…
ಪಂದ್ಯಾವಳಿಯ ಮೊದಲ ಟಾಸ್‌ ಗೆದ್ದವರು ಗುಜರಾತ್‌ ಜೈಂಟ್ಸ್‌ ನಾಯಕಿ ಬೆತ್‌ ಮೂನಿ. ಮೊದಲ ಓವರ್‌ ಆ್ಯಶ್ಲಿ ಗಾರ್ಡನರ್‌ ಎಸೆದರೆ, ಮೊದಲ ಎಸೆತ ಯಾಸ್ತಿಕಾ ಭಾಟಿಯಾ ಎದುರಿಸಿದರು. ಅವರೇ ಮೊದಲ ರನ್‌ ಹೊಡೆದು ಮೊದಲಿಗರಾಗಿ ಔಟಾದರು. ಕೂಟದ ಈ ಪ್ರಥಮ ವಿಕೆಟ್‌ ತನುಜಾ ಕನ್ವರ್‌ ಪಾಲಾಯಿತು. ಮೊದಲ ಸಿಕ್ಸರ್‌ ಹಾಗೂ ಬೌಂಡರಿ ಹ್ಯಾಲಿ ಮ್ಯಾಥ್ಯೂಸ್‌ ಬ್ಯಾಟ್‌ನಿಂದ ಸಿಡಿಯಿತು. ಇದನ್ನು ನೀಡಿದವರು ಮಾನ್ಸಿ ಜೋಶಿ. ಮೊದಲ ಅರ್ಧ ಶತಕ ಕೌರ್‌ ಅವರಿಂದ ದಾಖಲಾಯಿತು.

ಸಂಕ್ಷಿಪ್ತ ಸ್ಕೋರ್‌: ಮುಂಬೈ ಇಂಡಿ ಯನ್ಸ್‌-5 ವಿಕೆಟಿಗೆ 207 (ಕೌರ್‌ 65, ಮ್ಯಾಥ್ಯೂಸ್‌ 47, ಕೆರ್‌ ಔಟಾಗದೆ 45, ಸ್ಕಿವರ್‌ 23, ಪೂಜಾ 15). ಗುಜರಾತ್‌ ಜೈಂಟ್ಸ್‌ 15.1 ಓವರ್‌ಗಳಲ್ಲಿ 64 ರನ್ನಿಗೆ ಆಲೌಟ್‌ (ದಯಾಲನ್‌ ಹೇಮಲತಾ 29, ಸೈಕಾ ಐಶಾಕ್‌ 11ಕ್ಕೆ 4).

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next