Advertisement

ಹಾರ್ಲೆ ಡೇವಿಡ್‌‌ಸನ್‌ ಬೈಕ್‌ ಬಳಸಿ ಹಣ ದೋಚಿದ್ದ ಕಳ್ಳನ ಸೆರೆ

12:35 PM Jan 08, 2021 | Team Udayavani |

ಬೆಳಗಾವಿ: ಬೆಲೆಬಾಳುವ ಹಾರ್ಲೆ-ಡೇವಿಡ್‌‌ಸನ್ ಬೈಕ್ ಬಳಸಿಕೊಂಡು ಮಹಾಂತೇಶ ನಗರದ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್‌ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಸ್ಥೆಯ ಕೀಲಿ ಮುರಿದು ಹಣ ದೋಚಿದ್ದ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ
ಯಶಸ್ವಿಯಾಗಿದ್ದಾರೆ.

Advertisement

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸುಭಾಷ ನಗರದ ಮುಜಫರ್‌ ಮಹಮ್ಮದ್‌ ಶೇಖ ಎಂಬಾತನನ್ನು ಬಂಧಿಸಲಾಗಿದೆ. 15ಲಕ್ಷ ರೂ. ಮೌಲ್ಯದ 301 ಗ್ರಾಂ. ಚಿನ್ನಾಭರಣ, ಒಂದು ಲಕ್ಷ ರೂ. ನಗದು ಹಣ ಹಾಗೂ 6.50 ಲಕ್ಷ ರೂ. ಮೌಲ್ಯದ ಹಾರ್ಲೆ ಡೇವಿಡಸನ್‌ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 22 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿ. 30ರ ನಡುರಾತ್ರಿ ಬ್ಯಾಂಕಿಗೆ ಕನ್ನ ಹಾಕಿದ ಕಳ್ಳ ಸಂಸ್ಥೆಯ ಕೀಲಿ ಮುರಿದು ಒಳ ನುಗ್ಗಿದ್ದಾನೆ.

ಇದನ್ನೂ ಓದಿ:ಬೆಳ್ತಂಗಡಿ: ಕಲ್ಮಂಜ ಗ್ರಾಮದಲ್ಲಿ ಸತ್ತು ಬಿದ್ದ ಎರಡು ಹದ್ದುಗಳು, ಸ್ಥಳಕ್ಕೆ ಅಧಿಕಾರಿಗಳ ಭೇಟಿ

ಟ್ರೇಜರಿ ಕತ್ತರಿಸಿ ಅದರಲ್ಲಿ ಇಟ್ಟಿದ್ದ ಬಂಗಾರದ ಆಭರಣ ಹಾಗೂ ನಗದು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದನು. ಈ ಕುರಿತು ನರೇಂದ್ರ ಬಸವರಾಜ ಮಾಳಮಾರುತಿ ಠಾಣೆಯಲ್ಲಿ ದೂರು ನೀಡಿದ್ದರು. ಮಾರ್ಕೆಟ್‌ ಎಸಿಪಿ ಸದಾಶಿವ ಕಟ್ಟಿಮನಿ ಹಾಗೂ ಮಾಳಮಾರುತಿ ಇನ್ಸಪೆಕ್ಟರ್‌ ಸುನೀಲ ಪಾಟೀಲ ನೇತೃತ್ವದಲ್ಲಿ ಪೊಲೀಸರು ಕಳ್ಳನ ಬಂಧನಕ್ಕೆ ಜಾಲ ಬೀಸಿದ್ದರು. ಬೆರಳಚ್ಚು ಪಿಐ ಮಹಾದೇವ ಕುಂಬಾರ, ಮಾಳಮಾರುತಿ ಪಿಎಸ್‌ಐ ಹೊನ್ನಪ್ಪ ತಳವಾರ, ಎಎಸ್‌ಐ ಎ.ಆರ್‌. ದುಂಡಗಿ, ಸಿಬ್ಬಂದಿಗಳಾದ ಎಂ.ಜೆ. ಕುರೇರ, ಕೆ.ಬಿ. ಗೌರಾಣಿ, ಜೆ.ಎನ್‌. ಭೋಸಲೆ, ಎಲ್‌. ಎಂ. ಮುಶಾಪುರೆ, ಎಸ್‌.ಎಂ. ಗುಡದೆ„ಗೋಳ, ಮಂಜುನಾಥ ಮೇಲಸರ್ಜಿ, ಎಂ.ಬಿ. ಅಡವಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next