Advertisement

ಬೇರೆ ಹೀರೋಯಿನ್ಸ್‌ಗೆ ಸಿಗದಂಥ ಪಾತ್ರ ನನಗೆ ಸಿಕ್ಕಿದೆ : ಹರಿಪ್ರಿಯಾ

08:27 AM Nov 10, 2021 | Team Udayavani |

ನಟಿ ಹರಿಪ್ರಿಯಾ ‘ತಾಯಿ ಕಸ್ತೂರ್‌ ಬಾ’ ಸಿನಿಮಾದಲ್ಲಿ ನಟಿಸುತ್ತಿರೋದು ನಿಮಗೆ ಗೊತ್ತೇ ಇದೆ. ಈ ಚಿತ್ರದಲ್ಲಿ ಹರಿಪ್ರಿಯಾ ಮಹಾತ್ಮಾ ಗಾಂಧೀಜಿ ಪತ್ನಿ ಕಸ್ತೂರ್‌ ಬಾ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮೂರು ಶೇಡ್‌ನಲ್ಲಿ ಹರಿಪ್ರಿಯಾ ನಟಿಸಿದ್ದು, ಇತ್ತೀಚೆಗೆ ಆ ಗೆಟಪ್‌ ಅನ್ನು ರಿವೀಲ್‌ ಮಾಡಿದ್ದಾರೆ.

Advertisement

ಯುವ, ಮಧ್ಯ ಹಾಗೂ ವಯಸ್ಸಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಬರಗೂರು ರಾಮಚಂದ್ರಪ್ಪ ನಿರ್ದೇಶನ ಮಾಡಿದ್ದಾರೆ. “ನನ್ನ ಜನರೇಶನ್‌ನ ಬೇರೆ ಹೀರೋಯಿನ್ಸ್‌ಗೆ ಸಿಗದಂಥ ಅಪರೂಪದ ಪಾತ್ರ ಈ ಸಿನಿಮಾದಲ್ಲಿ ನನಗೆ ಸಿಕ್ಕಿದೆ.

ಹೊಸಥರದ ಪಾತ್ರಗಳನ್ನು ಬಯಸುವ ನನಗೆ, ಈ ಕಥೆ ಮತ್ತು ಪಾತ್ರ ಎರಡೂ ತುಂಬ ಇಷ್ಟವಾಯ್ತು. ಒಬ್ಬ ತಾಯಿಯಾಗಿ, ಹೆಂಡತಿಯಾಗಿ, ಸ್ವತಂತ್ರ್ಯ ಹೋರಾಟಗಾರರಾಗಿ ಕಸ್ತೂರ್‌ಬಾ ಅವರ ಬೇರೆ ಬೇರೆ ವ್ಯಕ್ತಿತ್ವಗಳ ಪರಿಚಯ ಇಲ್ಲಿದೆ ಎಂದು ಹರಿಪ್ರಿಯಾ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next