Advertisement

ನೆರೂಲ್‌ ಶ್ರೀ ಶನೀಶ್ವರ ಮಂದಿರದಲ್ಲಿ ಹರಿಕಥಾ ಕಾಲಕ್ಷೇಪ

11:49 AM Mar 25, 2021 | Team Udayavani |

ನವಮುಂಬಯಿ: ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ 60ನೇ ಹುಟ್ಟುಹಬ್ಬ ಪ್ರಯುಕ್ತ 60 ಕಾರ್ಯಕ್ರಮಗಳ ಜ್ಞಾನವಾಹಿನಿ ಕಾರ್ಯ ಕ್ರಮವು ಶ್ರೀ ಗುರುದೇವಾ ಸೇವಾ ಬಳಗ ಮಹಾರಾಷ್ಟ್ರ ಘಟಕ ನವಿ ಮುಂಬಯಿಯ ಭಕ್ತರು ಇವರಿಂದ ಮಾ. 21ರಂದು ಸಂಜೆ ಶ್ರೀ ಶನೀಶ್ವರ ಮಂದಿರ ನೆರೂಲ್‌ ಇದರ ಮೊದಲ ಮಹಡಿಯ ಸಭಾಂಗಣದಲ್ಲಿ ನಡೆಯಿತು.

Advertisement

60 ಕಾರ್ಯಕ್ರಮಗಳ 7ನೇ ಕಾರ್ಯಕ್ರಮದ ಅಂಗವಾಗಿ ಶ್ರೀಕೃಷ್ಣ ವಿಟuಲ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ ಹರಿದಾಸ ಶ್ರೀ ವಿದ್ವಾನ್‌ ಕೈರೆಬೆಟ್ಟು ವಿಶ್ವನಾಥ್‌ ಭಟ್‌ ಅವರಿಂದ ಭಕ್ತ ತಾಮ್ರಧ್ವಜ ಎಂಬ ಹರಿಕಥಾ ಕಾಲಕ್ಷೇಪ ಅತೀ ಉತ್ತಮವಾಗಿ ಶನೀಶ್ವರ ಮಂದಿರದ ಪ್ರಾಯೋಜಕತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಷಷ್ಠ éಬ್ದ ಸಮಿತಿಯ ಗೌರವಾಧ್ಯಕ್ಷ ವಾಮಯ್ಯ ಶೆಟ್ಟಿ , ಗುರುದೇವಾ ಸೇವಾ ಬಳಗದ ಗೌರವ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಶೆಟ್ಟಿ ಪೇಟೆಮನೆ, ನೆರೂಲ್‌ ಶ್ರೀ ಶನಿ ಮಂದಿರದ ಅಧ್ಯಕ್ಷ ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ಹಾಗೂ ಅದ್ಯಪಾಡಿಗುತ್ತು ಕರುಣಾಕರ್‌ ಎಸ್‌. ಆಳ್ವ , ದಾಮೋದರ ಶೆಟ್ಟಿ , ರೇವತಿ ವಿ. ಶೆಟ್ಟಿ , ಸ್ವರ್ಣಲತಾ ದಾಮೋದರ ಶೆಟ್ಟಿ, ಅನಿಲ್‌ ಕುಮಾರ್‌ ಹೆಗ್ಡೆ, ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ, ತಾರಾನಾಥ್‌ ಶೆಟ್ಟಿ ಪುತ್ತೂರು, ಜಗದೀಶ್‌ ಶೆಟ್ಟಿ ಪನ್ವೆಲ… ಸಹಿತ ಇನ್ನಿತರ ಸ್ಥಳೀಯ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಗುರು ಭಕ್ತರು, ತುಳು-ಕನ್ನಡಿಗರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಬಾಲಾಜಿ ಕ್ಯಾಟರರ್ಸ್‌ ಇವರಿಂದ ಲಘು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ಯಶಸ್ಸಿಗೆ ಗುರುದೇವಾ ಸೇವಾ ಬಳಗ ಮಹಾರಾಷ್ಟ್ರ ಘಟಕ ಷಷ್ಠ éಬ್ದ ಸಮಿತಿಯ ಸಂಯೋಜಕ ಮಿತ್ರ ಬಳಗದವರು ಸಹಕರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next