Advertisement

ಹರಿಹರ: ಆಸ್ತಿ ವಿಚಾರದ ಗಲಾಟೆ; ಅಣ್ಣನನ್ನು ಇರಿದು ಕೊಂದ ತಮ್ಮ

12:42 PM May 15, 2023 | Team Udayavani |

ದಾವಣಗೆರೆ: ಆಸ್ತಿ ವಿಚಾರವಾಗಿ ಅಣ್ಣನನ್ನು ತಮ್ಮ ಚಾಕುನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಹರಿಹರದಲ್ಲಿ ಭಾನುವಾರ ರಾತ್ರಿ ನಡೆದಿದೆ

Advertisement

ಪ್ರಶಾಂತ್ ನಗರದ ನಿವಾಸಿ ಕೆ.ಜಿ ಕುಮಾರ (31) ಕೊಲೆಯಾದ ವ್ಯಕ್ತಿ. ಹರಿಹರದ ಗುಂಡಪ್ಪ ಎಂಬುವರಿಗೆ ಇಬ್ಬರು ಪತ್ನಿಯರಿದ್ದು ನಗರದ ಭರಂಪುರ ನಿವಾಸಿ ಎರಡನೇ ಪತ್ನಿ ರತ್ನಮ್ಮನ ಪುತ್ರ ರಾಜು ಹಾಗೂ ಮೊದಲನೇ ಪತ್ನಿ ಲಕ್ಷಮ್ಮ ಕೊನೆಯ ಮಗನಾದ ಕುಮಾರ್ ನಡುವೆ ಆಸ್ತಿ ವಿಚಾರದಲ್ಲಿ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿತ್ತು.

ಇವರಿಬ್ಬರ ಮಧ್ಯೆ ಮನಸ್ತಾಪವಿದ್ದು ಪದೇ ಪದೇ ಸಣ್ಣಪುಟ್ಟ ಜಗಳ ನಡೆಯುತ್ತಿದ್ದು ಭಾನುವಾರ ರಾತ್ರಿ ದಾವಣಗೆರೆಯಿಂದ ಹರಿಹರಕ್ಕೆ ವಾಪಸ್ ಬರುತ್ತಿರುವ ಮಾರ್ಗ ಮಧ್ಯೆ ಕುಮಾರ್ ಮೇಲೆ ತಮ್ಮ ರಾಜು ಮತ್ತು ಮಾರುತಿ ಎಂಬುವವರು ಹಲ್ಲೆ ಮಾಡಿದ್ದಾರೆ. ಕೂಡಲೇ ಕುಮಾರ್ ನನ್ನು ಹರಿಹರ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಆಸ್ಪತ್ರೆಯಲ್ಲಿಯೇ ಕುಮಾರ್ ಮೇಲೆ ರಾಜು ಹಲ್ಲೆ ನಡೆಸಿ ಚಾಕುವಿನಿಂದ ತಿವಿದಿದ್ದಾರೆ. ತೀವ್ರವಾಗಿ ರಕ್ತಸಾವ್ರಗೊಂಡ ಕುಮಾರ್ ಅವರನ್ನು ದಾವಣಗೆರೆಗೆ ಕರೆತರುವಾಗ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:Soft Signal ನಿಯಮವನ್ನೇ ತೆಗೆದು ಹಾಕಿದ ICC: ಏನಿದು ಸಾಫ್ಟ್ ಸಿಗ್ನಲ್? ಇಲ್ಲಿದೆ ಡಿಟೈಲ್ಸ್

ಕುಮಾರ್ ಪತ್ನಿ ರೇಖಾ ಹರಿಹರ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಜು ಹಾಗೂ ಮಾರುತಿಯನ್ನು ಪೋಲೀಸರು ಬಂಧಿಸಿದ್ದಾರೆ.

Advertisement

ಘಟನಾ ಸ್ಥಳಕ್ಕೆ ದಾವಣಗೆರೆ ಉಪವಿಭಾಗ ಅಧೀಕ್ಷಕರಾದ ಕನ್ನಿಕಾ ಸಕ್ರಿವಾಲ್, ನಗರ ಠಾಣೆ ಇನ್ಸ್ಪೆಕ್ಟರ್ ದೇವಾನಂದ್ ಟಿ, ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಪರಿಶೀಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next