Advertisement

ರಾಜಕಾರಣಿಗಳಿಂದ ಸಣ್ಣ-ಪುಟ್ಟ ಸಮಾಜಗಳ ನಿರ್ಲಕ್ಷ್ಯ

04:32 PM Aug 25, 2019 | Naveen |

ಹರಿಹರ: ಸಣ್ಣ-ಪುಟ್ಟ ಸಮಾಜಗಳನ್ನು ರಾಜಕಾರಣಿಗಳು ಕರಿಬೇವಿನ ಸೊಪ್ಪಿನಂತೆ ಬಳಸಿಕೊಂಡು ನಂತರ ನಿರ್ಲಕ್ಷಿಸುತ್ತಾರೆ ಎಂದು ಕಲಬುರಗಿ ಕುಂಚೂರು ಸವಿತಾ ಪೀಠದ ಧರ್ಮಾಧಿಕಾರಿ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

Advertisement

ನಗರದ ಜೆ.ಸಿ. ಬಡಾವಣೆಯಲ್ಲಿ ಶ್ರೀ ಅಂಜನೇಯಸ್ವಾಮಿ ದೇವಸ್ಥಾನದ ನವೀಕರಣ, ನವಗ್ರಹಗಳ ಪ್ರತಿಷ್ಠಾಪನೆ ಹಾಗೂ ಗೋಪುರದ ಕಳಸಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಣ್ಣ, ಪುಟ್ಟ ಸಮಾಜದವರನ್ನು ಸಣ್ಣ, ಪುಟ್ಟ ಆಸೆ, ಆಮಿಷ ತೋರಿ ಸೆಳೆದುಕೊಂಡು, ಉಪಯೋಗ ಪಡೆದು ಚುನಾವಣೆ ನಂತರ ಅವರನ್ನು ಮರೆಯುತ್ತಾರೆ ಎಂದರು.

ಸವಿತಾ ಸಮಾಜವೂ ಕೂಡ ಊಟಕ್ಕೆ ಕರಿಬೇವಿನ ಸೊಪ್ಪಿನ ರೀತಿಯಲ್ಲಿ ಬಳಕೆಯಾಗುತ್ತಿದ್ದು, ಸಮಾಜ ಬಾಂಧವರು ಎಚ್ಚೆತ್ತುಕೊಳ್ಳಬೇಕು. ಸಂಘಟನೆ, ಒಗ್ಗಟ್ಟು ಇಲ್ಲದ್ದೆ ಇದಕ್ಕೆ ಕಾರಣ ಎಂಬುದನ್ನು ಅರಿತುಕೊಳ್ಳಬೇಕು ಎಂದರು. ಸವಿತಾ ಸಮಾಜ ವ್ಯಾಪಕವಾಗಿದ್ದರೂ ಸಣ್ಣ ಸಮಾಜವಾಗಿ ಗುರುತಿಸಿಕೊಂಡಿದೆ. ಹಿಂದುಳಿದ ಈ ಸಮಾಜಕ್ಕೆ ಸೂಕ್ತ ರಾಜಕೀಯ, ಸಾಮಾಜಿಕ ಸ್ಥಾನ, ಮಾನಗಳು ಸಿಕಿಲ್ಲ. ಆದರೆ ಸಂಘಟನೆ ಇದ್ದಿದ್ದರೆ ಈ ನಷ್ಟ ಆಗುತ್ತಿರಲಿಲ್ಲ. ಸಂಘಟನೆ ಬರುವುದು ಶಿಕ್ಷಣ, ಜಾಗೃತಿಯಿಂದ. ಸವಿತಾ ಸಮಾಜ ಮುಖ್ಯವಾಹಿನಿಗೆ ಬರುವಂತಾಗಬೇಕೆಂದು ಆಶಿಸಿದರು.

ಶಾಸಕ ಎಸ್‌.ರಾಮಪ್ಪ ಮಾತನಾಡಿ, ನನ್ನ ಗೆಲುವಿಗೆ ಸವಿತಾ ಸಮಾಜದವರ ಸಹಕಾರ ಗಣನೀಯ. ಈ ಸಮಾಜದ ಋಣ ನನ್ನ ಮೇಲಿದೆ. ನನ್ನ ಅವಧಿಯಲ್ಲಿ ಎಲ್ಲಾ ಸಹಕಾರ ನೀಡುತ್ತೇನೆ ಎಂದರು.

ಮಾಜಿ ಶಾಸಕ ಬಿ.ಪಿ.ಹರೀಶ್‌ ಮಾತನಾಡಿ, ಸಣ್ಣ ಸಮಾಜದವರಾದರೂ ಸವಿತಾ ಸಮಾಜದವರು ಈ ದೇವಸ್ಥಾನದ ಅಭಿವೃದ್ಧಿ ಕೈಗೊಂಡು, ದೊಡ್ಡ ಸಮಾರಂಭ ಮಾಡಿರುವುದು ಸಂತಸದ ವಿಷಯ. ಸಂಸದ ಜಿ.ಎಂ.ಸಿದ್ದೇಶ್ವರ್‌ರಿಂದ ಅನುದಾನ ಕೊಡಿಸಿ ಸಮಾಜದ ಅಭಿವೃದ್ಧಿಗೆ ಬೆಂಬಲಿಸಲಾಗುವುದು ಎಂದರು.

Advertisement

ಮಾಜಿ ಶಾಸಕ ಎಚ್.ಎಸ್‌.ಶಿವಶಂಕರ್‌ ಮಾತನಾಡಿ, ನಾನು ಶಾಸಕನಾಗಿದ್ದ ಅವಧಿಯಲ್ಲಿ ನೀಡಿದ 5 ಲಕ್ಷ ರೂ. ಅನುದಾನದಲ್ಲಿ ದೇವಸ್ಥಾನದ ಅಭಿವೃದ್ಧಿಯನ್ನು ಉತ್ತಮವಾಗಿ ನೆರವೇರಿಸಲಾಗಿದೆ ಎಂದರು.

ಸವಿತಾ ಸಮಾಜದ ಅಧ್ಯಕ್ಷ ವೈ.ಆರ್‌.ಗುಂಟೇಶ್‌ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಬಿ.ಎಂ.ವಾಗೀಶಸ್ವಾಮಿ, ನಗರಸಭೆ ಸದಸ್ಯರಾದ ನೀತಾ ಮೆಹರ್ವಾಡೆ, ಎಂ.ಎಸ್‌.ಬಾಬುಲಾಲ್, ಆರ್‌.ಸಿ.ಜಾವಿದ್‌, ಮಹಬೂಬ್‌ ಬಾಷಾ, ಉದ್ಯಮಿ ತುಕಾಮಣಿ ಸಾ ಭೂತೆ, ವಿ.ಜಿ. ನಾಗಣ್ಣ, ಎನ್‌. ಗೋವಿಂದಮ್ಮ, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಪಿ.ಹನುಮಂತಪ್ಪ, ತಾಲೂಕು ಗೌರವಾಧ್ಯಕ್ಷ ಜಿ.ಎಚ್.ರಾಜು, ಪ್ರಧಾನ ಕಾರ್ಯದರ್ಶಿ ವಿ.ಎನ್‌.ಗೋಪಾಲಸ್ವಾಮಿ, ಎಸ್‌.ಎನ್‌.ಲಕ್ಷ್ಮಣ, ಜಿ.ಪಿ. ಶ್ರೀಕಾಂತ್‌, ಯುವ ಘಟಕದ ಅಧ್ಯಕ್ಷ ರಾಜು, ದಾವಣಗೆರೆ ವೆಂಕಟಾ ಛಲಪತಿ, ರಾಣಿಬೆನ್ನೂರ ರಾಜು ದೇವರಪಲ್ಲಿ, ಮಂಜುಳಾ, ರುಕ್ಮಿಣಿ, ಶಾರದಮ್ಮ, ಹೇಮವತಿ, ವೀಣಾ, ರಮ್ಯ, ಗೀತಮ್ಮ, ಸೋಮೇಶ್ವರಿ, ಕವಿತಾ, ಗಿರಿಜಮ್ಮ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next