Advertisement

ಸರ್ಕಾರಿ ಆಸ್ಪತ್ರೆಗೆ ಜಿಪಂ ಅಧ್ಯಕ್ಷೆ ದಿಢೀರ್‌ ಭೇಟಿ-ಪರಿಶೀಲನೆ

04:55 PM Mar 13, 2020 | Naveen |

ಹರಿಹರ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ದಿಢೀರ್‌ ಭೇಟಿ ನೀಡಿದ ಜಿಪಂ ಅಧ್ಯಕ್ಷೆ ಯಶೋಧಮ್ಮ ಮರಳಪ್ಪ ಆಸ್ಪತ್ರೆ ಸ್ಥಿತಿಗತಿ, ವೈದ್ಯರ, ಸಿಬ್ಬಂದಿಗಳ ಕಾರ್ಯ ನಿರ್ವಹಣೆ ಪರಿಶೀಲಿಸಿದರು.

Advertisement

ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು, ಆಸ್ಪತ್ರೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೇವಲ ಹೆಸರಿಗಷ್ಟೆ ಇದ್ದು, ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದಾಗ ಅದನ್ನು ಪರಿಶೀಲಿಸಿದ ಅಧ್ಯಕ್ಷರು, ಕೂಡಲೆ ರಿಪೇರಿ ಮಾಡಿಸಿ ದಿನದ ಇಪ್ಪತ್ನಾಲ್ಕು ಗಂಟೆಯೂ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲು ಆಸ್ಪತ್ರೆಯ ಸಿಬ್ಬಂದಿಗೆ ಸೂಚಿಸಿದರು.

ಆಸ್ಪತ್ರೆಯಲ್ಲಿ ಹಾಸಿಗೆ ತೊಳೆಯುವ ಮಹಿಳಾ ಸಿಬ್ಬಂದಿಯೊಬ್ಬರು ತಮಗೆ ನಿತ್ಯ ನೀಡುವ ಸಾಬೂನು, ಪೌಡರ್‌ ಸಾಕಾಗುತ್ತಿಲ್ಲ. ಬಟ್ಟೆಗೆ ತಕ್ಕಷ್ಟು ಪ್ರಮಾಣದಲ್ಲಿ ನೀಡಿದರೆ ತೊಳೆದ ಬಟ್ಟೆಗಳು ಸ್ವತ್ಛವಾಗುತ್ತವೆ. ಇದಲ್ಲದೆ ಬಟ್ಟೆ ತೊಳೆಯುವ ಸ್ಥಳದಲ್ಲಿ ಸರಾಗವಾಗಿ ನೀರು ಹರಿಯುವುದಿಲ್ಲ, ಅದನ್ನು ಸರಿಪಡಿಸಬೇಕು ಎಂದು ಅಧ್ಯಕ್ಷರ ಗಮನಕ್ಕೆ ತಂದಾಗ ಅಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ ಸರಿಪಡಿಸುತ್ತೇನೆ ಎಂದರು.

ಆಸ್ಪತ್ರೆಯ ಸ್ವತ್ಛತೆಯ ಬಗ್ಗೆ ಕೇವಲ ಸಿಬ್ಬಂದಿಗಳನ್ನು ದೂರದೆ ಸಾರ್ವಜನಿಕರು ಕೈ ಜೋಡಿಸಬೇಕು. ಇದು ಸಾರ್ವಜನಿಕರ ಆಸ್ತಿ ಎಂದ ಅವರು, ಅಲ್ಲಲ್ಲಿ ಗುಟ್ಕಾ ತಿಂದು ಉಗಳಿದ್ದು ನೋಡಿ ಬೇಸರ ವ್ಯಕ್ತಪಡಿಸಿದರು. ಕರ್ತವ್ಯದಲ್ಲಿದ್ದ ವೈದ್ಯಾರಾದ ಸವಿತಾ, ಮಮತ, ಸುರೇಶ್‌, ಪಂಕಜಾ ಮತ್ತಿತರರೊಂದಿಗೆ ಮಾಹಿತಿ ಪಡೆದುಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಶೋಧಮ್ಮ, ಸರ್ಕಾರವು ಬಡವರಿಗಾಗಿ ಆಸ್ಪತ್ರೆಯಲ್ಲಿ ಹೆ„ಟೆಕ್‌ ತಂತ್ರಜ್ಞಾನದ ಎಕ್ಸೆ-ರೇ ಯಂತ್ರವನ್ನೇನೋ ಅಳವಡಿಸಿದೆ. ಆದರೆ ಒಂದು ಎಕ್ಸ್‌ರೇಗೆ 120ರೂ ಶುಲ್ಕ ಮಾಡಿದ್ದು ಬಡವರಿಗೆ ಹೊರೆಯಾಗುತ್ತದೆ, ಹಿಂದಿನಂತೆ 60ರೂ. ದರವನ್ನೆ ನಿಗದಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.

Advertisement

ದಿನಗೂಲಿ ನೌಕರರಿಗೆ ಸಮಯಕ್ಕೆ ಸರಿಯಾಗಿ ಸಂಬಳ ಮತ್ತು ಸಮವಸ್ತ್ರ ವ್ಯವಸ್ಥೆ ಮಾಡದೆ ಇರುವುದು ಗಮನಕ್ಕೆ ಬಂದಿದ್ದು ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಮಾತನಾಡಿ ಗುತ್ತಿಗೆದಾರರಿಗೆ ಆದೇಶಿಸುವಂತೆ ಸೂಚಿಸುತ್ತೇನೆ ಎಂದರು.

ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆಸ್ಪತ್ರೆಯ ಕೊಠಡಿಗಳು, ಪಿಠೊಪಕರಣಗಳ ಕೊರತೆ ಸೇರಿದಂತೆ ಆಸ್ಪತ್ರೆಯಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳಿದ್ದು ಶೀಘ್ರದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಜಿಪಂ ಸದಸ್ಯರಾದ ಬಿ.ಎಂ.ವಾಗೀಶ್‌ ಸ್ವಾಮಿ, ವಿ.ಡಿ. ಹೇಮವತಿ, ನಗರಸಭಾ ಸದಸ್ಯರಾದ ರಜನಿಕಾಂತ್‌, ಆಟೋ ಹನುಮಂತಪ್ಪ, ಬಿಜೆಪಿ ಮುಖಂಡರಾದ ರಾಘವೇಂದ್ರ ಹೆಚ್‌.ಎಸ್‌., ಪ್ರವೀಣ್‌ ಜಿ. ಪವಾರ್‌, ರವಿ ರಾಯ್ಕರ್‌, ದಿನೇಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.