Advertisement

ದಾಖಲೆ ಪ್ರಮಾಣದ ಮದ್ಯ ಮಾರಾಟ

06:38 PM May 08, 2020 | Naveen |

ಹರಿಹರ: ಹೆಚ್ಚಿನ ದರ ವಸೂಲಿ, ರಶೀದಿ ನೀಡದಿರುವುದು, ಕನಿಷ್ಠ ಮಿತಿ ಮೀರಿ ಬೇಕಾದವರಿಗೆ ಬಾಕ್ಸ್‌ಗಟ್ಟಲೆ ಮದ್ಯ ಮಾರಾಟ ಮಾಡುವ ಆರೋಪದ ಮಧ್ಯೆ ಮದ್ಯದ ವ್ಯಾಪಾರ ನಗರದಲ್ಲಿ ಎರಡನೇ ದಿನವಾದ ಮಂಗಳವಾರ ನಡೆಯಿತು.

Advertisement

ದಾವಣಗೆರೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದ್ದ ಕಾರಣ ಅಲ್ಲಿನ ಹಲವಾರು ಜನರು ಕದ್ದು, ಮುಚ್ಚಿ ಬೈಕ್‌, ಕಾರುಗಳಲ್ಲಿ ಬಂದು ಮದ್ಯ ಖರೀದಿಸಿದರು. ಸಂಜೆ 6 ಗಂಟೆಯಾಗುತ್ತಿದ್ದಂತೆ ಪೊಲೀಸರು ಮದ್ಯದಂಗಡಿಗಳ ಮುಂದೆ ಸಾಲಾಗಿ ನಿಂತಿದ್ದ ಜನರನ್ನು ಚದುರಿಸಿದರು. 7 ಗಂಟೆವರೆಗೆ ಅವಕಾಶ ನೀಡಬೇಕೆಂದು ವಾಗ್ವಾದ ಮಾಡಿದವರಿಗೆ ಲಾಠಿ ರುಚಿ ತೋರಿಸಿದರು.

35 ಲಕ್ಷ ರೂ. ವ್ಯಾಪಾರ: ಸೋಮವಾರ ಒಂದೇ ದಿನ ತಾಲೂಕಿನಲ್ಲಿ ದಾಖಲೆಯ 35 ಲಕ್ಷ ರೂ.ಗೂ ಅಧಿಕ ಮದ್ಯ ಮಾರಾಟವಾಗಿದೆ. ಅನುಮತಿ ಪಡೆದ 23 ಅಂಗಡಿಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ಬಹುತೇಕ ಬ್ರಾಂಡ್‌ ಗಳು ಖಾಲಿಯಾಗಿದ್ದವು. ಎರಡನೇ ದಿನವೂ ಭರ್ಜರಿ ವ್ಯಾಪಾರದ ನಿರೀಕ್ಷೆ ಇತ್ತಾದರೂ ಅಬಕಾರಿ ಇಲಾಖೆಯ ಸರ್ವರ್‌ ಡೌನ್‌ ಆಗಿ ವ್ಯಾಪಾರಿಗಳಿಗೆ ಮದ್ಯ ಸರಬರಾಜು ಮಾಡುವಲ್ಲಿ ವ್ಯತ್ಯಯವಾಯಿತು. ವ್ಯಾಪಾರಿಗಳು ಬ್ಯಾಂಕಿನಲ್ಲಿ ಹಣ ಪಾವತಿಸಿ ಆನ್‌ ಲೈನ್‌ನಲ್ಲೇ ಇಂಡೆಂಟ್‌ ದಾಖಲಿಸಿ, ನಂತರ ಅಬಕಾರಿ ಡಿಪೋದಲ್ಲಿ ಬೇಕಾದ ಸ್ಟಾಕ್‌ ಪಡೆಯಬೇಕಾಗಿತ್ತು. ಸರ್ವರ್‌ ಸಮಸ್ಯೆಯಿಂದ ಇಂಡೆಂಟ್‌ ಹಾಕಲಾಗದೆ ವ್ಯಾಪಾರಿಗಳು ಪರದಾಡಿದರು. ಬೆಳಿಗ್ಗೆ ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ಸ್ಟಾಕ್‌ ಸರಬರಾಜಾಯಿತು. ನಂತರ ಕೈಕೊಟ್ಟ ಸರ್ವರ್‌ ಸಂಜೆ 4ಕ್ಕೆ ಸರಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next