Advertisement

ಹರಿಹರ: 12 ಜನರಿಗೆ ಸೋಂಕು

11:17 AM Jul 10, 2020 | Naveen |

ಹರಿಹರ: ಗ್ರಾಮೀಣ ಪ್ರದೇಶದಲ್ಲಿ ಎರಡು, ನಗರದಲ್ಲಿ 10 ಸೇರಿದಂತೆ ಗುರುವಾರ ಒಂದೇ ದಿನ ತಾಲೂಕಿನಲ್ಲಿ 12 ಕೋವಿಡ್ ಪ್ರಕರಣ ಪತ್ತೆಯಾಗಿವೆ. ಜು. 3 ರಂದು ಗಂಟಲು ದ್ರಾವಣ ಸಂಗ್ರಹಿಸಿದ್ದ ಗಾಂಧಿ ನಗರದ ಸೊಂಕಿತ ವ್ಯಕ್ತಿಯ ಸಂಪರ್ಕಿತ ಕುಟುಂಬಸ್ಥರು ಹಾಗೂ ನೆರೆಹೊರೆಯವರ ಪೈಕಿ ಸೋಂಕಿತರ ಕುಟುಂಬದ 55 ವರ್ಷದ ಪುರುಷ, 48 ವರ್ಷದ ಮಹಿಳೆ, 25 ವರ್ಷದ ಮಹಿಳೆ ಮತ್ತು 4 ವರ್ಷದ ಬಾಲಕ, ನೆರೆಹೊರೆಯ 32 ವರ್ಷದ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ಧೃಢಪಟ್ಟಿದೆ.

Advertisement

ಜು. 4ರಂದು ಜ್ವರದ ಕಾರಣಕ್ಕೆ ಆಸ್ಪತ್ರೆಗೆ ಬಂದು ಪರೀಕ್ಷೆಗೆ ಒಳಗಾಗಿದ್ದ ನಗರದ ತೆಗ್ಗಿಕೇರಿಯ 22 ವರ್ಷದ ಯುವಕ, ಜು. 1 ರಂದು ಗಂಟಲು ದ್ರಾವಣ ಸಂಗ್ರಹಿಸಿದ್ದ ಅಗಸರ ಬೀದಿಯ ಕಂಟೇನ್ಮೆಂಟ್‌ನ 50 ವರ್ಷದ ಪುರುಷ, 23 ವರ್ಷದ ಮಹಿಳೆ ಹಾಗೂ ವಿದ್ಯಾನಗರದ 55 ವರ್ಷದ ಪುರುಷ, 31 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ತಾಲೂಕಿನ ಗಂಗನರಸಿ ಗ್ರಾಮಕ್ಕೆ ಮುಂಬೈನಿಂದ ಆಗಮಿಸಿದ್ದ ನಾಲ್ಕು ಜನ ಕುಟುಂಬ ಸದಸ್ಯರ ಗಂಟಲು ದ್ರವವನ್ನು ಜು. 6 ರಂದು ಸಂಗ್ರಹಿಸಿ ಹೋಂ ಕ್ವಾರಂಟೈನ್‌ ಮಾಡಲಾಗಿತ್ತು. ಗುರುವಾರ ವರದಿ ಬಂದಿದ್ದು 25 ವರ್ಷದ ಮಹಿಳೆ ಹಾಗೂ ಎರಡೂವರೆ ವರ್ಷದ ಮಗುವಿಗೆ ಕೋವಿಡ್ ದೃಢಪಟ್ಟಿದೆ.

ಕ್ವಾರಂಟೈನ್‌ನಲ್ಲಿದ್ದ ಎಲ್ಲಾ ಸೋಂಕಿತರನ್ನು ಸಂಜೆ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 44ಕ್ಕೇರಿದೆ. ಒಟ್ಟು 11 ಕಂಟೇನ್ಮೆಂಟ್‌ ಪ್ರದೇಶಗಳನ್ನು ಗುರುತಿಸಲಾಗಿದೆ. ನಗರದ ಕಂಟೇನ್ಮೆಂಟ್‌ ಪ್ರದೇಶಗಳಿಗೆ ಗುರುವಾರ ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ| ಚಂದ್ರಮೋಹನ್‌, ತಾಪಂ ಇಒ ಲಕ್ಷ್ಮೀಪತಿ, ಆರೋಗ್ಯ ಇಲಾಖೆಯ ಡಾ| ಶಶಿಕಲಾ, ಎಂ. ಉಮ್ಮಣ್ಣ, ಎಂ.ವಿ. ಹೊರಕೇರಿ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next