Advertisement

ಹರಿಹರದಿಂದ ಗೆದ್ದ ಮೂವರು ಸಚಿವರು

11:42 PM Mar 20, 2023 | Team Udayavani |

ಜೀವನದಿ ತುಂಗಭದ್ರಾ ತಟದಲ್ಲಿರುವ ಹರಿಹರ ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರುವಾಸಿ. ಸ್ವಾತಂತ್ರ್ಯ ಅನಂತರ ಹಲವು ದಶಕಗಳ ಕಾಲ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಗೆಲುವು ಸಾಧಿಸಿರುವುದು ಇತಿಹಾಸ. ಆದರೆ ಹರಿಹರ ಕ್ಷೇತ್ರ ಇದಕ್ಕೆ ಅಪವಾದ. 1952ರ ಮೊದಲ ವಿಧಾನ ಸಭಾ ಚುನಾವಣೆಯಿಂದ ಇದುವರೆಗಿನ 15 ಚುನಾವಣೆಗಳಲ್ಲೂ ಕಾಂಗ್ರೆಸ್‌ ಎದುರಾಳಿ ಪಕ್ಷದಿಂದ ಪ್ರಬಲ ಪೈಪೋಟಿ ಎದುರಿಸುತ್ತಲೇ ಬಂದಿದೆ. ಕಠಿನ ಪರಿಶ್ರಮದಿಂದಲೇ ಕಾಂಗ್ರೆಸ್‌ ಎಂಟು ಬಾರಿ ಗೆಲುವು ಸಾಧಿಸಿದ್ದು ಕಾಂಗ್ರೆಸೇತರ ಅಭ್ಯರ್ಥಿಗಳು ಏಳು ಸಲ ಕ್ಷೇತ್ರ ಪ್ರತಿನಿಧಿಸಿದ್ದಾರೆ.

Advertisement

1952ರಿಂದ 1972ರವರೆಗೆ ಎಚ್‌.ಸಿ. ಸಿದ್ಧವೀರಪ್ಪ ಹಾಗೂ ಗಾಂಜಿ ವೀರಪ್ಪನವರ ಮಧ್ಯೆ ಜಿದ್ದಾಜಿದ್ದಿ ಪೈಪೋಟಿಯ ಕ್ಷೇತ್ರವಾಗಿತ್ತು. 1989ರ ಅನಂತರ ಎರಡು ದಶಕಗಳ ಕಾಲ ಎಚ್‌.ಶಿವಪ್ಪ ಹಾಗೂ ಡಾ| ವೈ.ನಾಗಪ್ಪನವರ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಸತತ ಎರಡು, ಅನಂತರ ಮತ್ತೊಂದು ಅವಧಿ ಸೇರಿ ಮೂರು ಬಾರಿ ಆಯ್ಕೆಯಾದ ಎಚ್‌.ಸಿ.ಸಿದ್ಧವೀರಪ್ಪ ಹಾಗೂ ಡಾ|ವೈ.ನಾಗಪ್ಪ ಮತ್ತು ಎರಡು ಬಾರಿ ಆಯ್ಕೆ ಯಾಗಿದ್ದ ಎಚ್‌.ಶಿವಪ್ಪ ಸಹಿತ ಕ್ಷೇತ್ರದ ಮೂವರು ರಾಜ್ಯ ಸರಕಾರದಲ್ಲಿ ಸಚಿವ ರಾಗಿ ಸೇವೆ ಸಲ್ಲಿಸಿದ್ದಾರೆ.

ಹಿಂದಿನ ನಾಯಕರ ಜಿದ್ದಾಜಿದ್ದಿನ ರಾಜಕಾರಣ ಪರಂ ಪರೆ ಈಗಲೂ ಮುಂದುವರೆದಿದೆ. ಹರಿ ಮತ್ತು ಹರನ ಸಂಗಮ ಕ್ಷೇತ್ರ ಎನಿಸಿದ ಹರಿಹರ ಕ್ಷೇತ್ರದಲ್ಲಿ ಮತದಾರರು ರಾಷ್ಟ್ರೀಯ ಪಕ್ಷಗಳ ಜತೆಗೆ ಪಕ್ಷೇತರರನ್ನೂ ಆಯ್ಕೆ ಮಾಡುವ ಮೂಲಕ ಪೈಪೋಟಿ ಹೆಚ್ಚಿಸಿಕೊಂಡು ಬಂದಿರುವುದು ವಿಶೇಷ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next