ಮುಂಬಯಿ: ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಟ್ರೈàನಿಂಗ್ ಸೆಂಟರ್ (ಐಐಟಿಸಿ) ಸಂಸ್ಥೆಯ ಪ್ರಫುಲ್ಲಾ ಎಸ್. ಕೆ. ಉರ್ವಾಳ್ ಮತ್ತು ಬಿ. ಆರ್. ಹೊಟೇಲ್ ಸಮೂಹದ ಚಂಚಲಾ ಬಿ. ಆರ್. ಶೆಟ್ಟಿ ಪರಿವಾರವು ಪೇಜಾವರ ಮಠ ಮುಂಬಯಿ ಶಾಖೆಯ ಸಹಯೋಗದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಅನುಗ್ರಹದೊಂದಿಗೆ ಸೆ. 3 ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಗಾನ ಗಂಧರ್ವ ಬಿರುದಾಂಕಿತ ಡಾ| ವಿದ್ಯಾಭೂಷಣ ಬಳಗದ ಭಕ್ತಿಗಾನಸುಧೆ ಸಂಗೀತ ಕಾರ್ಯಕ್ರಮ ನಡೆಯಿತು.
ಧರ್ಮಾರ್ಥವಾಗಿ ನಡೆಸಲ್ಪಟ್ಟ ಭಕ್ತಿ¤ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ವಿದ್ಯಾನಿಧಿ ವಿದ್ಯಾಭೂಷಣ ಬಳಗವು ಹರಿದಾಸ ಸಾಹಿತ್ಯದ ಭಕ್ತಿಗಾನಸುಧೆ ಪ್ರಸ್ತುತಪಡಿಸಿದರು. ಹಿಮ್ಮೇಳದಲ್ಲಿ ಮೃದಂಗದಲ್ಲಿ ಎಂ. ಆರ್. ಸಾಯಿನಾಥ್, ವಿ. ಶೇಖರ್ ಅವರು ಘಟಾಂನಲ್ಲಿ ಮತ್ತು ವಾಯಲೀನ್‌ನಲ್ಲಿ ಎಸ್. ಪ್ರದೇಶ್ ಆಚಾರ್ಯ ಅವರು ಸಹಕರಿಸಿದರು. ಕಾರ್ಯಕ್ರಮದ ಪ್ರಾಯೋಜಕರುಗಳಾದ ಬಿ. ಆರ್. ಹೊಟೇಲ್ ಸಮೂಹದ ಆಡಳಿತ ನಿರ್ದೇಶಕ ಬಿ. ಆರ್. ಶೆಟ್ಟಿ, ಐಐಟಿಸಿ ಸಂಸ್ಥೆಯ ನಿರ್ದೇಶಕ ವಿಕ್ರಾಂತ್ ಉರ್ವಾಳ್ ಸರ್ವ ಕಲಾಕಾರರನ್ನು ಪುಷ್ಪಗುಚ್ಚವನ್ನಿತ್ತು ಗೌರವಿಸಿದರು.
ಈ ಸಂದರ್ಭದಲ್ಲಿ ವಿದ್ವಾನ್ ಎಸ್. ಎನ್. ಉಡುಪ, ವಿದ್ವಾನ್ ಅರವಿಂದ ಬನ್ನಿಂತ್ತಾಯ, ಉದ್ಯಮಿಗಳಾದ ಅನೂಪ್ ಶೆಟ್ಟಿ, ಸುಧೀರ್ ಆರ್. ಎಲ್. ಶೆಟ್ಟಿ, ರವಿ ಸುವರ್ಣ ಘಾಟ್ಕೊàಪರ್, ಮುರಳೀ ಭಟ್ ಡೊಂಬಿವಲಿ, ಸಂಜಯ್ ಮಿಸ್ತ್ರಿ, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಅಧ್ಯಕ್ಷ ಡಾ| ಎ. ಎಸ್. ರಾವ್, ಗೌರವ ಕಾರ್ಯದರ್ಶಿ ಬಿ. ಆರ್. ಗುರುಮೂರ್ತಿ, ಎಂ. ನರೇಂದ್ರ, ಶೇಖರ್ ಸಸಿಹಿತ್ಲು, ಶ್ರೀಧರ್ ರಾವ್ ಜೋಕಟ್ಟೆ, ಪದ್ಮನಾಭ ಸಸಿಹಿತ್ಲು, ಪೇಜಾವರ ಮಠದ ಮುಂಬಯಿ ಶಾಖಾಧಿಕಾರಿಗಳಾದ ಶ್ರೀಹರಿ ಭಟ್, ನಿರಂಜನ ಜೆ. ಗೋಗಟೆ ಮತ್ತಿತರರು ಹಾಜರಿದ್ದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಆಯೋಜಿಸಲಾಗಿದ್ದ ಕೃಷ್ಣವೇಷ ಸ್ಪರ್ಧಾ ಪುಟಾಣಿಗಳಿಗೆ ವಿದ್ಯಾ ಭೂಷಣರು ಬಹುಮಾನ ಪ್ರದಾನಿಸಿದರು. ಅಧಿತಿ ರಾಮದಾಸ್ ರೆಂಜಾಳ ಮತ್ತು ಕು| ಶ್ರೇಯಾ ಹರಿ ಭಟ್ ರಾಧಾಕೃಷ್ಣ ಅವರಿಂದ ನೃತ್ಯ ಪ್ರದರ್ಶನಗೊಂಡಿತು. ಪೇಜಾವರ ಮಠದ ಮುಖ್ಯ ವ್ಯವಸ್ಥಾಪಕ ರಾಮದಾಸ ಉಪಾಧ್ಯಾಯ ರೆಂಜಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಠದ ವ್ಯವಸ್ಥಾಪಕ ಪ್ರಕಾಶ್ ಆಚಾರ್ಯ ರಾಮಕುಂಜ ಅವರು ವಿದ್ಯಾಭೂಷಣ ಅವರಿಗೆ ಪುಷ್ಪಗುತ್ಛವನ್ನಿತ್ತು ಗೌರವಿಸಿ ವಂದಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್