Advertisement

ಮಿಡತೆ ಹಾವಳಿ ನಿಯಂತ್ರಿಸದಿದ್ದರೆ ಸಂಕಷ್ಟ

07:47 AM Jun 01, 2020 | Lakshmi GovindaRaj |

ಚನ್ನರಾಯಪಟ್ಟಣ: ಕೊರೊನಾ ಮಹಾಮಾರಿಯಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿರುವ ವೇಳೆಯಲ್ಲಿ ಮರುಭೂಮಿಯ ಮಿಡತೆಗಳ ದಂಡಿನ ಆಗಮನ ರೈತರನ್ನು ಆತಂಕ ದೂಡುತ್ತಿವೆ ಎಂದು ಶಾಸಕ ಸಿ.ಎನ್‌. ಬಾಲಕೃಷ್ಣ  ತಿಳಿಸಿದರು.

Advertisement

ಪಟ್ಟಣ ಮಿನಿ ವಿಧಾನ ಸೌಧದಲ್ಲಿ ಕೃಷಿ ಇಲಾಖೆ  ಏರ್ಪಡಿಸಿದ್ದ ಮರುಭೂಮಿ ಮಿಡತೆಗಳ ಜೀವನ ಚರಿತ್ರೆ ಹಾಗೂ ನಿಯಂತ್ರಣ ಕುರಿತು ಅರಿವು ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಿಡತೆ ಹಾವಳಿ  ನಿಯಂತ್ರಿಸದಿದ್ದರೆ ರೈತರು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಡಿ.ಎಚ್‌.ಬಸವರಾಜ್‌ ಮಾತನಾಡಿದರು.

ಕೇವಲ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸರಿಸುಮಾರು 4- 5 ಕೋಟಿ ಮಿಡತೆಗಳು ಒಮ್ಮೆಲೆ ಗಾಳಿ ಬೀಸಿದ ಕಡೆಗೆ ಪ್ರಯಾಣ ಬೆಳೆಸುತ್ತವೆ. ಭಾರತ, ಶ್ರೀಲಂಕಾ ಹಾಗೂ ಮಲೇಷಿಯಾ ದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿವೆ. ಪ್ರೌಢಾವಸ್ಥೆಗೆ ಬಂದ ಮಿಡತೆ ಮಣ್ಣಿನಲ್ಲಿ ಸರಿಸುಮಾರು 80 ರಿಂದ 100 ಕ್ಕೂ  ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಆಳವಾಗಿ ಉಳುಮೆ ಮಾಡುವ ಮಿಡತೆಗಳ ಮೊಟ್ಟೆ ಗಳನ್ನು ನಾಶ ಮಾಡಬಹುದು. ಜತೆಗೆ ಕ್ಲೋರೊಪೈರಿ ಪಾಸ್‌ ಹಾಗೂ ಮೆಲಾಥಿಯಾನ್‌ ಕ್ರಿಮಿನಾಶಕ ಸಿಂಪ ಡಿಸಿ ಮಿಡತೆ ಹಾವಳಿ ನಿಯಂತ್ರಿಸಬಹುದು ಎಂದರು.

ಒಂದು ದಿನದಲ್ಲಿ 135 ಕಿ.ಮೀ. ಶ್ರಮಿಸುವ ಸಾಮರ್ಥ್ಯ ಹೊಂದಿರುವ ಮಿಡತೆ ದಂಡು ಮಧ್ಯ ಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಹಾಗೂ ಮಹಾ ರಾಷ್ಟ್ರದಲ್ಲಿ ಸದ್ಯ ಹಾವಳಿ ಪ್ರಾರಂಭಿಸಿದ್ದು, ಬೆಳಗಾವಿ ಮೂಲಕ ರಾಜ್ಯಕ್ಕೂ  ಪ್ರವೇಶಿಸುವ ಸಾಧ್ಯತೆ ಇದೆ ಎಂದರು. ತಹಶೀಲ್ದಾರ್‌ ಜೆ.ಬಿ.ಮಾರುತಿ, ಕೃಷಿ ಇಲಾಖೆ ಅಧಿಕಾರಿ ರಶ್ಮಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸತೀಶ್‌, ವಲಯ ಅರಣ್ಯಾಧಿಕಾರಿ ಎಚ್‌. ಆರ್‌. ಹೇಮಂತ್‌ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next