Advertisement

ಜೈಲಿಗೆ ಹೋಗುವುದು ತಿಳಿದೇ ಹಾರ್ದಿಕ್ ಪಟೇಲ್ ಪಕ್ಷ ಬಿಟ್ಟಿದ್ದಾರೆ : ಜಗದೀಶ್ ಠಾಕೂರ್

08:27 PM May 19, 2022 | Team Udayavani |

ಅಹಮದಾಬಾದ್ : ಹಾರ್ದಿಕ್ ಪಟೇಲ್ ಗೆ ತಾನು ಜೈಲಿಗೆ ಹೋಗುವುದು ತಿಳಿದೇ ಪಕ್ಷ ಬಿಟ್ಟಿದ್ದಾರೆ ಎಂದು ಗುಜರಾತ್ ಕಾಂಗ್ರೆಸ್ ಮುಖಂಡ ಜಗದೀಶ್ ಠಾಕೂರ್ ಕಿಡಿ ಕಾರಿದ್ದಾರೆ.

Advertisement

ಹಾರ್ದಿಕ್ ವಿರುದ್ಧದ ದೇಶದ್ರೋಹದ ಪ್ರಕರಣವನ್ನು ರದ್ದುಪಡಿಸಲು ಅವರು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಈಗ ಅವರು 2-3 ದಿನ ಬಿಜೆಪಿ ಪರ ಮಾತನಾಡುತ್ತಾರೆ ಮತ್ತು ಅವರಿಗೆ ಬಿಜೆಪಿಯಿಂದ ‘ದೇಶಭಕ್ತ’ ಪ್ರಮಾಣಪತ್ರ ನೀಡಲಾಗುವುದು ಎಂದು ಠಾಕೂರ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಕೆಲಸವನ್ನೂ ನೀಡಿಲ್ಲ

ನಾನು ನನ್ನ 3 ವರ್ಷಗಳ ರಾಜಕೀಯ ಜೀವನವನ್ನು ಕಾಂಗ್ರೆಸ್‌ನಲ್ಲಿ ವ್ಯರ್ಥ ಮಾಡಿದ್ದೇನೆ. ನಾನು ಕಾಂಗ್ರೆಸ್‌ನಲ್ಲಿ ಇಲ್ಲದಿದ್ದಲ್ಲಿ ಗುಜರಾತ್‌ಗಾಗಿ ಉತ್ತಮವಾಗಿ ಕೆಲಸ ಮಾಡಬಹುದಿತ್ತು. ಪಕ್ಷದಲ್ಲಿದ್ದಾಗ ನನಗೆ ಕೆಲಸ ಮಾಡಲು ಅವಕಾಶ ಸಿಕ್ಕಿಲ್ಲ, ಕಾಂಗ್ರೆಸ್ ಕೆಲಸವನ್ನೂ ನೀಡಿಲ್ಲ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.

ಇದನ್ನೂ ಓದಿ : ಜ್ಞಾನವಾಪಿ ಬೆನ್ನಲ್ಲೇ ಮಥುರಾದ ಶ್ರೀಕೃಷ್ಣ ಜನ್ಮಭೂಮಿಯಲ್ಲಿರುವ ಈದ್ಗಾ ಮಸೀದಿ ತೆರವಿಗೆ ಅರ್ಜಿ

Advertisement

ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಹಾರ್ದಿಕ್ ಪಟೇಲ್, ಕಾಂಗ್ರೆಸ್ ಅದಾನಿ ಮತ್ತು ಅಂಬಾನಿಯನ್ನು ಗುರಿಯಾಗಿಸಿಕೊಂಡಿದೆ. ಒಬ್ಬ ಉದ್ಯಮಿ ತನ್ನ ಸ್ವಂತ ಪರಿಶ್ರಮದಿಂದ ಮೇಲಕ್ಕೆ ಬರುತ್ತಾನೆ. ನೀವು ಪ್ರತಿ ಬಾರಿಯೂ ಅದಾನಿ ಅಥವಾ ಅಂಬಾನಿಯನ್ನು ನಿಂದಿಸಲು ಸಾಧ್ಯವಿಲ್ಲ. ಪ್ರಧಾನಿ ಗುಜರಾತಿನವರಾಗಿದ್ದರೆ, ಅಂಬಾನಿ ಮತ್ತು ಅದಾನಿಗಳ ಮೇಲಿನ ನಿಮ್ಮ ಕೋಪವನ್ನು ಏಕೆ ಹೊರಹಾಕಬೇಕು? ಇದು ಜನರನ್ನು ದಾರಿ ತಪ್ಪಿಸುವ ಒಂದು ಮಾರ್ಗವಾಗಿದೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next