Advertisement

ಹಾರ್ದಿಕ್ ಪಾಂಡ್ಯರ 5 ಕೋಟಿ ರೂ. ಬೆಲೆ ವಾಚ್ ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು

09:26 AM Nov 16, 2021 | Team Udayavani |

ಮುಂಬೈ: ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ 5 ಕೋಟಿ ಮೌಲ್ಯದ ಎರಡು ವಾಚ್‌ಗಳನ್ನು ಕಸ್ಟಮ್ಸ್ ಇಲಾಖೆಯು ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಿದೆ.

Advertisement

ಐಸಿಸಿ ಟಿ20 ವಿಶ್ವಕಪ್ ನಿರಾಶಾದಾಯಕ ಫಲಿತಾಂಶದ ನಂತರ ಭಾರತೀಯ ಆಟಗಾರರು ತವರಿಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ವೇಳೆ ಹಾರ್ದಿಕ್ ಪಾಂಡ್ಯ ಅವರನ್ನು ಕಸ್ಟಮ್ಸ್ ಇಲಾಖೆ ತಡೆದು 5 ಕೋಟಿ ರೂಪಾಯಿ ಮೌಲ್ಯದ ಎರಡು ವಾಚ್‌ಗಳನ್ನು ವಶಕ್ಕೆ ಪಡೆದಿದೆ.

ಹಾರ್ದಿಕ್ ಪಾಂಡ್ಯ ಬಳಿಕ ದುಬಾರಿ ವಾಚ್ ಗಳ ಇನ್ ವಾಯ್ಸ್ ಇರಲಿಲ್ಲ. ಹೀಗಾಗಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:ಐಸಿಸಿ ಟಿ20 ವಿಶ್ವಕಪ್‌ ತಂಡದಲ್ಲಿ ಭಾರತೀಯರಿಲ್ಲ!

ಭಾರತ ತಂಡ ಟಿ20 ವಿಶ್ವಕಪ್ ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದೆ. ಹಲವು ವರ್ಷಗಳ ಬಳಿಕ ಮೊದಲ ಬಾರಿಗೆ ಸೆಮಿ ಫೈನಲ್ ಪ್ರವೇಶಿಸಲೂ ವಿಫಲವಾಗಿದೆ. ಭಾರತ ತಂಡ ಬುಧವಾರದಿಂದ ( ನ.17) ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಸರಣಿ ಆಡಲಿದ್ದು, ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆದಿಲ್ಲ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next