Advertisement

ಇನ್‌ಸ್ಟಾಗ್ರಾಮ್‌ನಲ್ಲಿ ಹಾರ್ದಿಕ್‌ ಪಾಂಡ್ಯಾ ಹೊಸ ದಾಖಲೆ…ಏನದು?

02:03 PM Mar 08, 2023 | Team Udayavani |

ಮುಂಬೈ: ಸದಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಲ್ಲಿರೋ ಟೀಂ ಇಂಡಿಯಾದ ಸ್ಟಾರ್‌ ಆಟಗಾರ, ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯಾ ಈಗ ಹೊಸ ಮೈಲಿಗಲ್ಲನ್ನು ತಲುಪಿದ್ದಾರೆ. ಆದರೆ ಇದು ಅವರ ಬ್ಯಾಟಿಂಗ್‌ನಿಂದಲೋ, ಬೌಲಿಂಗ್‌ನಿಂದಲೋ ದಾಖಲಾಗಿದ್ದಲ್ಲ. ಬದಲಾಗಿ ಅವರ ಇನ್‌ಸ್ಟಾಗ್ರಾಮ್‌ ಖಾತೆಯಿಂದ ಹಾರ್ದಿಕ್‌ ಈ ದಾಖಲೆ ಬರೆದಿದ್ದಾರೆ.

Advertisement

ಇತ್ತೀಚಿನ ವರ್ಷಗಳಲ್ಲಿ ಟೀಂ ಇಂಡಿಯಾದಲ್ಲಿ ಅತ್ಯಂತ ಜನಪ್ರಿಯ ಕ್ರಿಕೆಟರ್‌ ಆಗಿ ಬೆಳೆಯುತ್ತಿರುವ ಹಾರ್ದಿಕ್‌ನ ಫ್ಯಾನ್‌ ಫಾಲೋವರ್ಸ್‌ ಪಟ್ಟಿ ಮಾತ್ರ ದಿನದಿಂದ ದಿನಕ್ಕೆ ಬಳೆಯುತ್ತಲೇ ಇದೇ. ಇದೇ ಜನಪ್ರಿಯತೆಯಿಂದಾಗಿಯೇ ಹಾರ್ದಿಕ್‌ ಪಾಂಡ್ಯ ಇನ್‌ಸ್ಟಾಗ್ರಾಮ್‌ನಲ್ಲೂ ನೂತನ ದಾಖಲೆ ಬರೆದಿದ್ದಾರೆ. ಅಲ್ಲದೇ ಈ ದಾಖಲೆಯಿಂದ ಟೆನಿಸ್‌ ಲೋಕದ ದಿಗ್ಗಜರಾದ ರಫೆಲ್‌ ನಡಾಲ್‌, ರೋಜರ್‌ ಫೆಡರರ್‌ ಅವರನ್ನೂ ಮೀರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಕ್ರಿಕೆಟಿಗರ ಪೈಕಿ ಹಾರ್ದಿಕ್‌ ಪಾಂಡ್ಯಾ ಕೂಡಾ ಒಬ್ಬರು. ಇನ್‌ಸ್ಟಾಗ್ರಾಮ್‌ನಲ್ಲಿ 25 ಮಿಲಿಯನ್‌ ಫಾಲೋವರ್ಸ್‌ಗಳನ್ನು ಹೊಂದುವ ಮೂಲಕ ಆಫ್‌ ಫೀಲ್ಡ್‌ನಲ್ಲಿ ಕುಂಗ್‌ ಫು ಪಾಂಡ್ಯ ದಾಖಲೆ ಬರೆದಿದ್ದಾರೆ. ಈಗಾಗಲೇ ಟೀಂ ಇಂಡಿಯಾದ ಭರವಸೆಯ ನಾಯಕನಾಗುವ ಮಟ್ಟಕ್ಕೆ ಏರಿರುವ ಪಾಂಡ್ಯಾ ಈ ದಾಖಲೆಯಿಂದಾಗಿ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ಪಟ್ಟಿಯಲ್ಲೂ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಸನಿಹಕ್ಕೆ ಬಂದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ 25 ಮಿಲಿಯನ್‌ ಫಾಲೋವರ್ಸ್‌ಗಳನ್ನು ಪಡೆದುಕೊಳ್ಳುವ ಮೂಲಕ ಹಾರ್ದಿಕ್‌ ಅಂತಾ ದಾಖಲೆ ಏನು ಬರೆದಿದ್ದಾರೆ ಅಂದುಕೊಳ್ತೀರಾ.? ಹೌದು. ಕೇವಲ 29 ವರ್ಷ ವಯಸ್ಸಿನಲ್ಲೇ 25 ಮಿಲಿಯನ್‌ ಫಾಲೋವರ್ಸ್‌ಗಳನ್ನು ಹಾರ್ದಿಕ್‌ ಪಾಂಡ್ಯಾ ಹೊಂದಿದ್ದಾರೆ. ಈ ಮೂಲಕ ಅತಿ ಸಣ್ಣ ವಯಸ್ಸಿಗೆ 25 ಮಿಲಿಯನ್‌ ಫಾಲೋವರ್ಸ್‌ಗಳನ್ನು ಹೊಂದಿದ ವಿಶ್ವದ ಮೊದಲ ಕ್ರಿಕೆಟಿಗ ಎನ್ನುವ ಖ್ಯಾತಿಗೆ ಪಾಂಡ್ಯಾ ಪಾತ್ರರಾಗಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಪಾಂಡ್ಯಾ ತನ್ನ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: ಅಂತಿಮ ಟೆಸ್ಟ್‌ಗೆ ಭರತ್‌ ಬದಲು ಇಶಾನ್‌ ಕಿಶನ್‌?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next