Advertisement

Harda ಪಟಾಕಿ ಕಾರ್ಖಾನೆ ದುರಂತ: ಮಿತಿಗಿಂತ ಹೆಚ್ಚಿನ ಸ್ಪೋಟಕ ಸಂಗ್ರಹಿಸಲಾಗಿತ್ತು, ಮೂವರು ವಶ

09:08 AM Feb 07, 2024 | Team Udayavani |

ಮಧ್ಯಪ್ರದೇಶ: ಹರ್ದಾ ನಗರದಲ್ಲಿ ಮಂಗಳವಾರ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭಾರಿ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿದ್ದು ೧70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Advertisement

ರಾಜ್ಯದ ರಾಜಧಾನಿ ಭೋಪಾಲ್‌ನಿಂದ ಸುಮಾರು 150 ಕಿಮೀ ದೂರದಲ್ಲಿರುವ ಹರ್ದಾ ನಗರದ ಹೊರವಲಯದಲ್ಲಿರುವ ಮಗರ್ಧ ರಸ್ತೆಯಲ್ಲಿರುವ ಬೈರಾಗರ್‌ನಲ್ಲಿ ಈ ಘಟನೆ ನಡೆದಿದ್ದು ಅಧಿಕಾರಿಗಳ ಪ್ರಕಾರ ಈ ಕಾರ್ಖಾನೆಯಲ್ಲಿ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸ್ಪೋಟಕಗಳನ್ನು ಸಂಗ್ರಹಿಸಿ ಇಡಲಾಗಿತ್ತು ಎಂದು ಹೇಳಿದ್ದಾರೆ. ಹಾಗಾಗಿ ಸ್ಪೋಟದ ತೀವ್ರತೆ ಹೆಚ್ಚಾಗಲು ಕಾರಣ ಎನ್ನಲಾಗಿದೆ.

ಸ್ಪೋಟದ ತೀವ್ರತೆಗೆ ಕೆಲ ಕಿಲೋಮೀಟರ್ ದೂರದ ವರೆಗೆ ಭೂಮಿ ಕಂಪಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ, ಘಟನಾ ಸ್ಥಳದಲ್ಲಿ ಛಿದ್ರಗೊಂಡ ದೇಹಗಳು ಕಂಡುಬಂದಿದ್ದು ಸ್ಪೋಟದ ತೀವ್ರತೆಯನ್ನು ಹೇಳುವಂತ್ತಿದೆ, ಅಲ್ಲದೆ ಹತ್ತಿರದ ಕೆಲ ಕಾರ್ಖಾನೆಗಳಿಗೂ ಅಗ್ನಿ ಆವರಿಸಿ ಹೆಚ್ಚಿನ ದುರಂತ ಸಂಭವಿಸಿದೆ ಎಂದು ಹೇಳ್ಳಲಾಗಿದೆ.

ಮಾಲೀಕರ ವಿರುದ್ಧ ಕ್ರಮ:
ಕಾರ್ಖಾನೆಯ ಇಬ್ಬರು ಮಾಲೀಕರಾದ ರಾಜೇಶ್ ಅಗರವಾಲ್ ಮತ್ತು ಸೋಮೇಶ್ ಅಗರವಾಲ್ ಎಂದು ಗುರುತಿಸಲಾಗಿದ್ದು, ಸಂಜೆಯ ವೇಳೆಗೆ ರಾಜ್‌ಗಢ್ ಜಿಲ್ಲೆಯ ಸಾರಂಗ್‌ಪುರದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಫೀಕ್ ಖಾನ್ ಎಂಬ ಇನ್ನೊಬ್ಬ ವ್ಯಕ್ತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

ಕಾರ್ಖಾನೆಯ ಮಾಲೀಕರ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 304 (ಕೊಲೆಗೆ ಸಮನಾಗದ ಅಪರಾಧಿ ನರಹತ್ಯೆಗೆ ಶಿಕ್ಷೆ), 308 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

ಇದನ್ನೂ ಓದಿ: Gateway of India ಬಳಿ ಕುವೈಟ್ ಮೂಲದ ಬೋಟ್ ವಶಕ್ಕೆ ಪಡೆದ ನೌಕಾಪಡೆ, ತೀವ್ರ ವಿಚಾರಣೆ

Advertisement

Udayavani is now on Telegram. Click here to join our channel and stay updated with the latest news.

Next