Advertisement

Inflation; ಬಡವರ ಕನಸುಗಳನ್ನು ಕಸಿದುಕೊಳ್ಳಲಾಗಿದೆ: ವಿಡಿಯೋ ಹಂಚಿಕೊಂಡ ರಾಹುಲ್

09:02 PM Oct 25, 2024 | Team Udayavani |

ಹೊಸದಿಲ್ಲಿ: ಆದಾಯ ಕುಸಿತ ಮತ್ತು ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಕಷ್ಟಪಟ್ಟು ದುಡಿಯುವ ಬಡ ಜನರ ಕನಸುಗಳನ್ನು ಕಸಿದುಕೊಳ್ಳಲಾಗಿದೆ. ಉಳಿತಾಯವನ್ನು ಮನೆಗೆ ತೆಗೆದುಕೊಂಡು ಹೋಗಲು ಅನುವು ಮಾಡಿಕೊಡುವ ಹೊಸ ಯೋಜನೆಗಳ ಅಗತ್ಯವಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಸಂವಾದದಲ್ಲಿ ಹೇಳಿಕೊಂಡಿದ್ದಾರೆ.

Advertisement

ಸಾಮಾನ್ಯ ಕ್ಷೌರದ ಅಂಗಡಿಯೊಂದರಲ್ಲಿ ಕ್ಷೌರ ಮಾಡಿಸಿಕೊಂಡ ವಿಡಿಯೋ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ‘ಅಜಿತ್ ಭಾಯ್ ಅವರ ಈ ನಾಲ್ಕು ಮಾತುಗಳು ಮತ್ತು ಅವರ ಕಣ್ಣೀರು ಇಂದು ಭಾರತದ ಪ್ರತಿಯೊಬ್ಬ ಬಡ ಮತ್ತು ಮಧ್ಯಮ ವರ್ಗದ ಕಷ್ಟಪಟ್ಟು ದುಡಿಯುವ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಕ್ಷೌರಿಕರಿಂದ ಚಮ್ಮಾರರು, ಕುಂಬಾರರಿಂದ ಬಡಗಿಗಳ ಆದಾಯ ಕುಸಿತ ಮತ್ತು ಹೆಚ್ಚುತ್ತಿರುವ ಹಣದುಬ್ಬರ ಕಾರ್ಮಿಕ ವರ್ಗದ ಸ್ವಂತ ಅಂಗಡಿಗಳ, ಮನೆಗಳ ಮತ್ತು ಸ್ವಾಭಿಮಾನದ ಕನಸುಗಳನ್ನು ಕಸಿದುಕೊಂಡಿದೆ” ಎಂದು ಹೇಳಿಕೊಂಡಿದ್ದಾರೆ.

“ಇಂದು ಜನನಾಯಕ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ಅಜಿತ್ ಅವರ ಅಂಗಡಿಗೆ ಹೋಗಿ ಅವರ ಜೀವನದ ಹೋರಾಟಗಳನ್ನು ಅರ್ಥಮಾಡಿಕೊಂಡರು” ಎಂದು ಕಾಂಗ್ರೆಸ್ ಪಕ್ಷ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next