ಸಾಗರ: ಪಕ್ಷದ ವರಿಷ್ಠರು ನೀಡುವ ಸೂಚನೆಗಳನ್ನು ಪಾಲಿಸಬೇಕು. ಸೂಚನೆ ಪಾಲಿಸುವುದರಲ್ಲಿಯೇ ಪಕ್ಷ, ಸಮೂಹ ಹಾಗೂ ವೈಯಕ್ತಿಕ ಯಶಸ್ಸು ಅಡಗಿರುತ್ತದೆ ಎಂದು ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಎಚ್. ಹಾಲಪ್ಪ ಹರತಾಳು ತಿಳಿಸಿದರು.
ತಾಲೂಕಿನ ವರದಾಮೂಲದಲ್ಲಿ ಬಿಜೆಪಿ ಗ್ರಾಮಾಂತರ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿಸಮಾರೋಪ ಭಾಷಣ ಮಾಡಿದ ಅವರು, ಯಾರು ಪಕ್ಷದ ಸೂಚನೆಗಳನ್ನಪರಿಪಾಲಿಸುತ್ತಾರೋ ಅವರ ರಾಜಕೀಯ ಭವಿಷ್ಯ ಸಹ ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಬಿಜೆಪಿ ಅತ್ಯಂತ ಸದೃಢವಾಗಿ ದೇಶಾದ್ಯಂತಬೆಳೆಯಲು ಇಂತಹ ಪ್ರವರ್ಗಗಳ ಮೂಲಕ ಪಡೆಯುವ ಬೌದ್ಧಿಕ ಶಿಕ್ಷಣ ಪ್ರಮುಖ ಪಾತ್ರವಹಿಸಿದೆ. ಅನೇಕ ಹಿರಿಯರು ರಾಷ್ಟ್ರ ನಿರ್ಮಾಣಉದ್ದೇಶದಿಂದ ಬಿಜೆಪಿಯನ್ನು ಕಟ್ಟಿದ್ದಾರೆ. ಅವರದ್ದು ಕೆಲವು ಕನಸುಗಳು ಇರುತ್ತವೆ. ಆ ಕನಸು ಸಾಕಾರಗೊಳಿಸುವ ಹೊಣೆಗಾರಿಕೆ ನಮ್ಮ ಮೇಲೆ ಇದೆ. ರಾಷ್ಟ್ರ ನಿರ್ಮಾಣ ಉದ್ದೇಶವಿದ್ದರೂಕೆಲವೊಂದಿಷ್ಟು ಯೋಜನೆಗಳನ್ನು ಮಾಡುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಬಿಜೆಪಿ ಎರಡು ಸ್ಥಾನದಿಂದ ಇದೀಗ ಅತಿ ದೊಡ್ಡ ಪಕ್ಷವಾಗಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದೆ. ಜೊತೆಗೆ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯತ್ವ ಹೊಂದಿದೆ ಎಂದರು.
ಪ್ರವರ್ಗದ ಮೂಲ ಉದ್ದೇಶ ಕಾರ್ಯಕರ್ತರಿಗೆ ಸಾಮಾನ್ಯ ರಾಜಕೀಯ ಜ್ಞಾನ ಕಲ್ಪಿಸುವುದು ಹಾಗೂ ಬಿಜೆಪಿ ಬೆಳೆದು ಬಂದ ರೀತಿಯನ್ನು ತಿಳಿಸಿಕೊಡುವುದಾಗಿರುತ್ತದೆ. ಮುಂದೆ ಗ್ರಾಪಂ ಸೇರಿದಂತೆ ಬೇರೆ ಬೇರೆ ಚುನಾವಣೆಗಳು ಬರುತ್ತವೆ. ಇಂತಹ ಸಂದರ್ಭದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವು ಯಾವ ರೀತಿ ಪ್ರಯತ್ನ ಮಾಡಬೇಕು. ಸೂಚನೆಯನ್ನು ಪಾಲಿಸುವುದರಲ್ಲಿಯೇ ನಮ್ಮ ಗೆಲುವು ಅಡಗಿರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ಅಭ್ಯಾಸ ವರ್ಗದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳು ರಾಜಕೀಯ ಪ್ರವೇಶ, ಸಾಮಾಜಿಕ ಜೀವನಹಾಗೂ ಪಾರದರ್ಶಕ ನಡೆನುಡಿ, ರಾಷ್ಟ್ರೀಯತೆ ಕುರಿತು ಅರಿತುಕೊಳ್ಳಲು ಸಾಧ್ಯವಿದೆ. ಬಿಜೆಪಿ ಕೇವಲ ಅಧಿಕಾರ ಪಡೆಯಲು ಇರುವ ಪಕ್ಷವಲ್ಲ. ಬಿಜೆಪಿಯ ಪ್ರಮುಖ ಉದ್ದೇಶ ಸಾಮಾಜಿಕ ಹಿತಚಿಂತನೆ ಹಾಗೂ ಸಮೂಹ ಜಾಗೃತಿಯಾಗಿದೆ. ಎರಡು ದಿನಗಳ ಅಭ್ಯಾಸ ವರ್ಗವು ಅಭೂತಪೂರ್ವ ಯಶಸ್ಸು ಗಳಿಸಲು ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ. ಅಭ್ಯಾಸ ವರ್ಗದಲ್ಲಿ ಪಡೆದಿರುವ ಮಾಹಿತಿಯನ್ನು ಉಪಯೋಗಿಸಿಕೊಂಡು ಬೂತ್‌ಮಟ್ಟದಲ್ಲಿ ತಮ್ಮ ಅನುಭವವನ್ನು ಹಂಚುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ಕುಪೇಂದ್ರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್. ಗಣೇಶ್ ಪ್ರಸಾದ್, ಭೀಮನಕೋಣೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವ.ಶಂ. ರಾಮಚಂದ್ರ ಭಟ್, ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಇದ್ದರು.ದೇವೇಂದ್ರಪ್ಪ ಸ್ವಾಗತಿಸಿದರು. ಗೌತಮ್ ಕೆ.ಎಸ್. ವಂದಿಸಿದರು. ಹು.ಭಾ. ಅಶೋಕ್ ನಿರೂಪಿಸಿದರು.