Advertisement
ತಾಲೂಕು ಆರೋಗ್ಯಾಧಿಕಾರಿ ಯಾಗಿದ್ದ ಡಾ| ಕಲಾವತಿ ಅವರನ್ನು ಮೈಸೂರಿಗೆ ವರ್ಗಾಯಿಸಿದ ಬಳಿಕ ನಾಗೇಂದ್ರ ಅವರ ಕಾರ್ಯಕ್ಷಮತೆ ಮೆಚ್ಚಿ ಅವರನ್ನು ತಾಲೂಕು ಪ್ರಭಾರ ಆರೋಗ್ಯ ಅಧಿಕಾರಿಯನ್ನಾಗಿ ಮಾಡಲಾಗಿತ್ತು. ಚಿಕ್ಕ ವಯಸ್ಸಿಗೆ ಅಧಿಕಾರಿಯಾಗಿದ್ದ ಇವರಿಗೆ ಹಿರಿಯ ವೈದ್ಯರು ಸಹಕಾರ ನೀಡುತ್ತಿರಲಿಲ್ಲ ಹಾಗೂ ಕೋವಿಡ್ ಹಿನ್ನೆಲೆಯಲ್ಲಿ 6 ತಿಂಗಳುಗಳಿಂದ ನಿರಂತರವಾಗಿ ಕರ್ತವ್ಯ ನಿರ್ವಹಿಸಿ ಕೆಲಸದ ಒತ್ತಡ ಹೆಚ್ಚಾಗಿತ್ತು ಎನ್ನಲಾಗಿದೆ. ಈ ಎರಡು ಕಾರಣಗಳಿಂದ ತನ್ನನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಪತ್ರವನ್ನೂ ಬರೆದಿದ್ದರು ಎನ್ನಲಾಗಿದೆ.
ಆರೋಗ್ಯ ಅಧಿಕಾರಿ ಡಾ| ಎಸ್. ಆರ್. ನಾಗೇಂದ್ರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು, ವೈದ್ಯರ ಕುಟುಂಬಕ್ಕೆ 30 ಲ. ರೂ. ಪರಿಹಾರ ಹಾಗೂ ಕುಟುಂ ಓರ್ವ ಸದಸ್ಯನಿಗೆ ಉದ್ಯೋಗ ನೀಡು ವುದಾಗಿ ಭರವಸೆ ನೀಡಿದ್ದಾರೆ.