Advertisement

ವಿಮಾನದಲ್ಲಿ ಗಗನ ಸಖಿಗೆ ಕಿರುಕುಳ:M.Tech ವಿದ್ಯಾರ್ಥಿ ಬಂಧನ 

11:39 AM Nov 08, 2017 | Team Udayavani |

ಬೆಂಗಳೂರು: ಕೋಲ್ಕತಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಗಗನ ಸಖಿಗೆ ಲೈಂಗಿಕ ಕಿರುಕುಳ ನೀಡಿದ ಎಂ.ಟೆಕ್‌ ವಿದಾರ್ಥಿಯೊಬ್ಬನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

 ನಗರದ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾರ್ಥಿಯಾಗಿರುವ ಕ್ಷಿತಿಜ್‌ ಗುರುಂಗ್‌ ಎಂಬಾತ ಬಂಧಿತ ಆರೋಪಿ  ಎಂದು ತಿಳಿದು ಬಂದಿದೆ.

ಗಗನ ಸಖಿಯೊಬ್ಬಳ ಮೈಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದು ಇದನ್ನು ಪ್ರಶ್ನಿಸಿದ ಇನ್ನೊಬ್ಬ ಗಗನ ಸಖಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ವೇಳೆ ತೀವ್ರ ವಾಗ್ವಾದ ನಡೆದಿದ್ದು ಸಹ ಪ್ರಯಾಣಿಕರು ಜಗಳ ಬಿಡಿಸಿದ್ದಾರೆ.

ವಿಮಾನ ಲ್ಯಾಂಡ್‌ ಆದ ತಕ್ಷಣ ಇಬ್ಬರು ಗಗನ ಸಖಿಯರು ಠಾಣೆಗೆ ತೆರಳಿ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಕ್ಷಿತಿಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next