Advertisement

ಬಳ್ಳಾರಿ ಜಿಲ್ಲೆಯಲ್ಲಿ ಸಂಡೂರು ತಾಲೂಕಿಗೆ ಮೊದಲ ಸ್ಥಾನ

03:58 PM May 02, 2019 | Naveen |

ಹರಪನಹಳ್ಳಿ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ದಶಕದ ನಂತರ ದಾವಣಗೆರೆ ಜಿಲ್ಲೆಗೆ ಹರಪನಹಳ್ಳಿ ತಾಲೂಕು ಪ್ರಥಮ ಸ್ಥಾನ ಲಭಿಸಿದೆ. 2016-17ನೇ ಸಾಲಿನಲ್ಲಿ ಶೇ.65.52 ಫಲಿತಾಂಶ ಪಡೆದು 6ನೇ ಸ್ಥಾನ ಹಾಗೂ 2017-18ನೇ ಸಾಲಿನಲ್ಲಿ ಶೇ.82.9 ಫಲಿತಾಂಶ ಪಡೆದು ಮೂರನೇ ಸ್ಥಾನ, 2018-19ನೇ ಸಾಲಿನಲ್ಲಿ ಶೇ.87.18 ಫಲಿತಾಂಶ ಪಡೆದು ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ಅಲ್ಲದೇ ತಾಲೂಕುವಾರು ಫಲಿತಾಂಶದಲ್ಲಿ ಹರಪನಹಳ್ಳಿ ರಾಜ್ಯಕ್ಕೆ 19ನೇ ಸ್ಥಾನ ಪಡೆದಿದೆ.

Advertisement

ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹರಪನಹಳ್ಳಿ ತಾಲೂಕಿನಲ್ಲಿ ಶೈಕ್ಷಣಿಕ ಬರಗಾಲವಿಲ್ಲ. ಪರೀಕ್ಷೆಗೆ ಹಾಜರಾದ ಒಟ್ಟು 3416 ವಿದ್ಯಾರ್ಥಿಗಳಲ್ಲಿ 2,978 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ತಾಲೂಕಿನ ಫಲಿತಾಂಶ ಶೇ.87.18ರಷ್ಟು ಬಂದಿದೆ. ಹರಪನಹಳ್ಳಿ ತಾಲೂಕು ಈಚೆಗೆ ದಾವಣಗೆರೆ ಜಿಲ್ಲೆಯಿಂದ ಬೇರ್ಪಟ್ಟು ಬಳ್ಳಾರಿ ಜಿಲ್ಲೆಗೆ ಸೇರಿದ್ದರೂ ಶೈಕ್ಷಣಿಕವಾಗಿ ದಾವಣಗೆರೆ ಜಿಲ್ಲೆ ವ್ಯಾಪ್ತಿಗೆ ಒಳಪಡುತ್ತದೆ. 2018-19ನೇ ಸಾಲಿನ ಫಲಿತಾಂಶದಲ್ಲಿ ಹರಪನಹಳ್ಳಿ ತಾಲೂಕು ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದೆ.

ಹರಪನಹಳ್ಳಿ ಪಟ್ಟಣದ ವಿವಿಎಸ್‌ ಪ್ರೌಢ ಶಾಲೆ, ಟಿಎಂಎಇ ಪ್ರೌಢಶಾಲೆ, ಮಹೇಶ್‌ ಪಬ್ಲಿಕ್‌ ಪ್ರೌಢಶಾಲೆ, ನಿಟ್ಟೂರು ಸರ್ಕಾರಿ ಪ್ರೌಢಶಾಲೆ, ಕಡಬಗೆರೆ ಸರ್ಕಾರಿ ಪ್ರೌಢಶಾಲೆ, ಹಲವಾಗಲು ಮೊರಾರ್ಜಿ ದೇಸಾಯಿ ವಸತಿ ಶಾಲೆ, ನಜೀರ್‌ ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಾಚಿಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಸೇರಿ ತಾಲೂಕಿನ ಒಟ್ಟು 8 ಪ್ರೌಢಶಾಲೆಗಳು 100ಕ್ಕೆ 100ರಷ್ಟು ಫಲಿತಾಂಶ ಪಡೆದುಕೊಂಡಿವೆ.

ತಾಲೂಕಿನ ಶಿಕ್ಷಣ ಇಲಾಖೆಯು ಫಲಿತಾಂಶ ಹೆಚ್ಚಳಕ್ಕೆ ಶೈಕ್ಷಣಿಕ ವರ್ಷ ಆರಂಭದಲ್ಲೇ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ, ವ್ಯಕ್ತಿತ್ವ ವಿಕಸನ ಹಾಗೂ ಓದುವ ವಿಧಾನ, ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಅಭ್ಯಾಸದ ಮಾರ್ಗಗಳ ಕುರಿತು ತರಬೇತಿ ನೀಡಲಾಗಿತ್ತು. ಪಟ್ಟಣದ ವಸತಿ ನಿಲಯಗಳಿಗೆ ಪ್ರತಿ ತಿಂಗಳು ಕನಿಷ್ಠ ಎರಡು ಬಾರಿ ಶಿಕ್ಷಕರ ತಂಡ ಭೇಟಿ ನೀಡಿ ಶೈಕ್ಷಣಿಕ ಮಾರ್ಗದರ್ಶನ ನೀಡಿದ್ದರು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಲಾಗಿತ್ತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುನಾಥಸ್ವಾಮಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next