ಹರಪನಹಳ್ಳಿ: ತಾಲೂಕಿನ ತಿಪ್ಪನಾಯಕನಹಳ್ಳಿ ಗ್ರಾಮದ ಸಮೀಪದಲ್ಲಿರುವ ಅಂಡರ್ ಬ್ರಿಡ್ಜ್ ಬಳಿ ರೈಲು ಡಿಕ್ಕಿ ಹೊಡೆದು ನಾಲ್ಕು ಕುರಿಗಳು ಸಾವನ್ನಪ್ಪಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
Advertisement
ತಿಪ್ಪನಾಯಕನಹಳ್ಳಿ ಗ್ರಾಮದ ಸಿ.ಪರಸಪ್ಪ ಎಂಬುವವರಿಗೆ ಸೇರಿದ ಕುರಿಗಳೆಂದು ಗುರುತಿಸಲಾಗಿದ್ದು, ಎಂದಿನಂತೆ ಪರಸಪ್ಪ ಅವರು ಗುರುವಾರ ಕುರಿಗಳನ್ನು ಮೇಯಿಸಲು ಹೋಗಿದ್ದಾಗ ರೈಲು ಹಳಿಯ ಪಕ್ಕದ ಅಂಡರ್ ಬ್ರಿಡ್ಜ್ ಬಳಿ ಕುರಿಗಳು ಮೇಯಿತ್ತಿರುವಾಗ ಕೊಟ್ಟರೂ ಕಡೆಯಿಂದ ಹರಿಹರ ಕಡೆಗೆ ಸಂಚಾರಿಸುತ್ತಿದ್ದ ರೈಲು ಆಕಸ್ಮಿಕವಾಗಿ ಡಿಕ್ಕಿ ಹೊಡೆದು ನಾಲ್ಕು ಕುರಿಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ.