Advertisement

ಪಕ್ಷದ ಚಟುವಟಿಕೆ ಮಾಹಿತಿ ನೀಡಲು ಸೂಚನೆ

03:55 PM May 23, 2020 | Naveen |

ಹರಪನಹಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ನಳೀಲ್‌ ಕುಮಾರ್‌ ಕಟೀಲ್‌ ಅವರು ದೂರವಾಣಿಯ ಮೂಲಕ ಸಂಪರ್ಕಿಸಿ ಕೋವಿಡ್ ನಿಯಂತ್ರಣ ಕುರಿತು ಮಾಹಿತಿ ಪಡೆದುಕೊಂಡಿದ್ದು, ಹದಿನೈದು ದಿನಗಳಿಗೊಮ್ಮೆ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡುವಂತೆ ಸೂಚಿಸಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್‌ ತಿಳಿಸಿದ್ದಾರೆ.

Advertisement

ಶಾಸಕರು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು ಪರಿಹಾರ ಮಾರ್ಗೋಪಾಯಗಳ ಚರ್ಚಿಸಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸುತ್ತಿದ್ದಾರೆ. ವಾರದಲ್ಲಿ ಎರಡು ಭಾರಿ ಕ್ಷೇತ್ರಕ್ಕೆ ಬಂದು ಸಂಕಷ್ಟದಲ್ಲಿರುವ ನಿರಾಶ್ರಿತರು, ನಿರ್ಗತಿಕರು, ವಲಸೆ ಕೂಲಿ ಕಾರ್ಮಿಕರು, ದಿನಕೂಲಿ ಕಾರ್ಮಿಕರು, ಅಲೆಮಾರಿಗಳು, ಆಶಾ ಕಾರ್ಯಕರ್ತೆಯರು ಸೇರಿ ದಂತೆ ಹಸಿದ ಬಡ ಕುಟುಂಬಗಳಿಗೆ ಅಗತ್ಯ ದಿನಬಳಕೆ ಸಾಮಾಗ್ರಿಗಳಿರುವ ಆಹಾರದ ಕಿಟ್‌ ಹಾಗೂ ಕೋವಿಡ್ ವಾರಿಯರ್ಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್‌ ವಿತರಿಸಿರುವ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.

ಮಳೆಯಿಂದ ಮನೆ, ಬೆಳೆ ಹಾನಿಗೊಳಗಾಗಿದ್ದ ಕುಟುಂಬಗಳಿಗೆ ಮತ್ತು ನಿರಾಶ್ರಿತರ ಕೇಂದ್ರದಲ್ಲಿ ಅಂತಾರಾಜ್ಯದ ವಲಸೆ ಕೂಲಿಕಾರ್ಮಿಕರು ಕ್ವಾರಂಟೈನ್‌ ಮುಗಿದ ಬಳಿಕ ಅವರ ಸ್ವಂತ ಊರುಗಳಿಗೆ ತೆರಳುವಾಗ ಶಾಸಕರು ಅವರಿಗೆ ಸ್ವತಃ ಹಣಕಾಸಿನ ನೆರವು ನೀಡಿದ್ದಾರೆ. ಜೊತೆಗೆ ಪಕ್ಷದ ಕೆಲ ಮುಖಂಡರು ಕಾರ್ಯಕರ್ತರು ಕ್ಷೇತ್ರದಲ್ಲಿ ಸಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚಿದ್ದಾರೆ ಮತ್ತು ತಾಲೂಕಿನ ಬಿಜೆಪಿ ಕಾರ್ಯಕರ್ತರಿಂದ ಹಣ ಸಂಗ್ರಹಿಸಿ ಪ್ರಧಾನಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡಲಾಗಿದೆ ಎಂದು ತಿಳಿಸಿದ್ದೇನೆ ಎಂದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next