Advertisement

ಹತ್ತೇ ದಿನಗಳಲ್ಲಿ ಕೋಟಿ ಧ್ವಜ ಮಾರಿದ ಅಂಚೆ ಇಲಾಖೆ

09:03 PM Aug 12, 2022 | Team Udayavani |

ನವದೆಹಲಿ: ಕೇಂದ್ರದ “ಹರ್‌ ಘರ್‌ ತಿರಂಗಾ’ ಅಭಿಯನವನ್ನು ಯಶಸ್ವಿಯಾಗಿಸುವತ್ತ ಕೆಲಸ ಮಾಡುತ್ತಿರುವ ಅಂಚೆ ಇಲಾಖೆಯು, ಕೇವಲ ಹತ್ತೇ ದಿನಗಳಲ್ಲಿ ಒಟ್ಟು 1 ಕೋಟಿಗೂ ಹೆಚ್ಚು ತ್ರಿವರ್ಣ ಧ್ವಜಗಳನ್ನು ಮಾರಾಟ ಮಾಡಿದೆ.

Advertisement

ಈ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಂಪರ್ಕ ಸಚಿವಾಲಯ “ದೇಶದಲ್ಲಿರುವ 1.5 ಲಕ್ಷ ಅಂಚೆ ಕಚೇರಿಗಳು ಹಾಗೂ ಆನ್‌ಲೈನ್‌ ಮೂಲಕ ಧ್ವಜಗಳನ್ನು ಮಾರಾಟ ಮಾಡಲಾಗಿದೆ.

ಇಲಾಖೆಯ 4.2 ಲಕ್ಷ ಸಿಬ್ಬಂದಿ ಅದಕ್ಕೆಂದು ದುಡಿದಿದ್ದಾರೆ. ಮೆರವಣಿಗೆ, ಬೈಕ್‌ ರ್ಯಾಲಿ, ಸಭೆಗಳನ್ನು ನಡೆಸಿ, ಸಾರ್ವಜನಿಕರಿಗೆ ಈ ಅಭಿಯಾನದ ಬಗ್ಗೆ ಮಾಹಿತಿ ಕೊಡಲಾಗಿದೆ. 1.75 ಲಕ್ಷ ಧ್ವಜಗಳು ಆನ್‌ಲೈನ್‌ ಮೂಲಕವೇ ಮಾರಾಟವಾಗಿದೆ. ದೇಶಾದ್ಯಂತ ಮನೆ ಮನೆಗಳಿಗೆ ಉಚಿತ ಡೆಲಿವರಿ ಮಾಡಲಾಗಿದೆ. 25 ರೂ.ಗೆ ಒಂದರಂತೆ ಧ್ವಜ ಮಾರಾಟ ಮಾಡಲಾಗಿದೆ’ ಎಂದು ತಿಳಿಸಿದೆ.

ಆ.15ರವರೆಗೂ ಅಂಚೆ ಕಚೇರಿಗಳಲ್ಲಿ ರಜೆ ಇಲ್ಲದಂತೆಯೇ ಧ್ವಜಗಳನ್ನು ಮಾರಾಟ ಮಾಡಲಾಗುವುದು. ಸಾರ್ವಜನಿಕರು ಅಂಚೆ ಕಚೇರಿಯಲ್ಲಿ ಅಥವಾ //epostoffice.gov.in ವೆಬ್‌ಸೈಟ್‌ನಲ್ಲಿ ಧ್ವಜವನ್ನು ಖರೀದಿಸಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next