Advertisement

ಹರ್‌ ಘರ್‌ ತಿರಂಗಾ ಅಭಿಯಾನ; ದರ್ಗಾ, ಮದ್ರಸಾಗಳಲ್ಲೂ ಹಾರಲಿದೆ ತ್ರಿವರ್ಣ

11:37 PM Aug 08, 2022 | Team Udayavani |

ಲಕ್ನೋ: ಹರ್‌ ಘರ್‌ ತಿರಂಗಾ ಅಭಿಯಾನದ ಅನ್ವಯ ಉತ್ತರ ಪ್ರದೇಶದಲ್ಲಿ ಇರುವ 5 ಲಕ್ಷ ಅಲ್ಪಸಂಖ್ಯಾತ ಸಮುದಾಯದವರ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಗುರಿಯನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಹಾಕಿಕೊಂಡಿದೆ. ಘಟಕದ ಅಧ್ಯಕ್ಷ ಬಸಿತ್‌ ಅಲಿ ಮಾತನಾಡಿ, ರಾಜ್ಯದ ಎಲ್ಲಾ ಮದರಸಾ, ದರ್ಗಾಗಳಲ್ಲಿಯೂ ಕೂಡ ರಾಷ್ಟ್ರಧ್ವಜ ಹಾರಿಸುವ ಬಗ್ಗೆ ಧಾರ್ಮಿಕ ಮುಖಂಡರಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

Advertisement

13 ಸಾವಿರ ಎತ್ತರದಲ್ಲಿ ಧ್ವಜ:
ಹರ್‌ ಘರ್‌ ತಿರಂಗಾ ಪ್ರಯುಕ್ತ ಇಂಡೋ-ಟಿಬೆಟಿಯನ್‌ ಗಡಿ ಪೊಲೀಸ್‌(ಐಟಿಬಿಪಿ) ಪಡೆಯ ಯೋಧರು ಉತ್ತರಾಖಂಡದಲ್ಲಿ ಧ್ವಜಾರೋಹಣ ನಡೆಸಿದ್ದಾರೆ. ಸಮುದ್ರ ಮಟ್ಟದಿಂದ 13,000 ಅಡಿಗಳಷ್ಟು ಎತ್ತರದಲ್ಲಿ ತ್ರಿವರ್ಣ ಹಾರಿಸಲಾಗಿದೆ. ಜುಲೈನಲ್ಲಿ ಐಟಿಬಿಪಿ ಯೋಧರು ಲಡಾಖ್‌ನಲ್ಲಿ 12,000 ಅಡಿ ಎತ್ತರದಲ್ಲಿ ತ್ರಿವರ್ಣ ಹಾರಿಸಿದ್ದರು.

ಇನ್ನೊಂದೆಡೆ, ಔಷಧೋತ್ಪಾದನಾ ಕಂಪನಿಗಳು ಕೂಡ ಆ.13ರಿಂದ 15ರ ಅವಧಿಯಲ್ಲಿ ಈ ಅಭಿಯಾನದಲ್ಲಿ ಭಾಗವಹಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

 

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next