ಹಳೆಯಂಗಡಿ : ಇಲ್ಲಿನ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದಿರಾನಗರದಲ್ಲಿ ಮನೆ ಮನೆಗೆ ಹರ್ ಘರ್ ಜಲ್ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಬುಧವಾರ ಬೆಳಿಗ್ಗೆ ನಡೆಯಿತು.
ಯೋಜನೆಯ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ನೀರಿನ ಸಂಪರ್ಕ ಪಡೆಯಲು ಒತ್ತಡ ಹೇರಿದಾಗ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯ ಗ್ರಾಮ ಪಂಚಾಯತ್‌ನ ಸದಸ್ಯರ ಸಹಿತ ಗ್ರಾಮಸ್ಥರು ನಮಗೆ ಈಗಾಗಲೇ ಗ್ರಾಮ ಪಂಚಾಯತ್‌ನಿಂದ ನಳ್ಳೀ ನೀರಿನ ಸಂಪರ್ಕ ಇದೆ, ಇದೀಗ ಮತ್ತೆ ಹರ್ ಘರ್ ಜಲ್ ಯೋಜನೆಯಲ್ಲಿ ಪಡೆಯುವ ಅವಶ್ಯಕತೆಯಿಲ್ಲ, ಒತ್ತಾಯ ಪೂರ್ವಕವಾಗಿ ಸಂಪರ್ಕ ಪಡೆಯಲು ಸೂಚಿಸಿದ್ದಕ್ಕೆ ಭಾರೀ ಆಕ್ಷೇಪ ವ್ಯಕ್ತವಾಯಿತು.
ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸದಸ್ಯರು, ಪಿಡಿಒ, ಯೋಜನೆಯ ಅಧಿಕಾರಿಗಳು, ಇಂಜಿನಿಯರ್, ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ : ತೀರ್ಥಹಳ್ಳಿ: ಕಾರ್ಮಿಕರಿಗೆ ಕೆಲಸಕ್ಕೆ ಅವಕಾಶ ಮಾಡಿಕೊಡದಿದ್ದಲ್ಲಿ ಉಗ್ರ ಹೋರಾಟ; ಪಿ.ಮಂಜುನಾಥ್