ಚಿಕ್ಕಮಗಳೂರು: ಪಕ್ಷದ ನೀತಿಯನ್ನು ಒಪ್ಪಿಕೊಂಡು ಯಾರ್ಯಾರು ಬರುತ್ತಾರೆ ಬರಬಹುದು. ಸುಮಲತಾ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ಅವರು ಪಕ್ಷೇತರ ಅಭ್ಯರ್ಥಿಯಾಗಿ ಘಟಾನುಘಟಿಗಳ ಎದುರು ಗೆದ್ದು ಬಂದವರು. ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರೆ ತುಂಬಾ ಸಂತೋಷ. ಅವರು ಪಕ್ಷಕ್ಕೆ ಸೇರ್ಪಡೆಯಾದರೆ ಪಕ್ಕಕ್ಕೆ ಬಲ ಬರುತ್ತದೆ ಎಂದು ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭವಾನಿ ರೇವಣ್ಣಗೆ ಬಿಜೆಪಿ ಟಿಕೆಟ್ ಆಫರ್ ನೀಡಿದ್ದಾರೆ. ನಾನು ಸಹೋದರಿ ಭವಾನಿಯವರ ಹೇಳಿಕೆಯನ್ನು ಗಮನಿಸಿದ್ದೇನೆ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ನಾನು ಮನೆಯಲ್ಲಿ ಗಲಾಟೆಯನ್ನು ಹೆಚ್ಚಿಸಲು ಬಯಸುವುದಿಲ್ಲ. ನನ್ನ ಮನಸ್ಸಿನಲ್ಲಿ ಭವಾನಿ ಅಕ್ಕ ನಮ್ಮ ಪಾರ್ಟಿಯಿಂದ ಅಭ್ಯರ್ಥಿಯಾಗಬೇಕು ಎನ್ನುವುದಿತ್ತು. ಭವಾನಿ ಅವರು ಹೊಳೆನರಸೀಪುರದಿಂದ ನಮ್ಮ ಪಕ್ಷದ ಅಭ್ಯರ್ಥಿಯಾಗಲಿ. ಭವಾನಿಗಿಂತ ಉತ್ತಮ ಅಭ್ಯರ್ಥಿ ಹೊಳೆನರಸೀಪುರಕ್ಕೆ ಬೇರೊಬ್ಬರಿಲ್ಲ ಎಂದರು.
ಇದನ್ನೂ ಓದಿ:28 ವರ್ಷದ ಸೊಸೆಯನ್ನೇ ಪ್ರೀತಿಸಿ ಮದುವೆಯಾದ 70 ವರ್ಷದ ಮಾವ.! ರಹಸ್ಯ ಮದುವೆಯ ಫೋಟೋ ವೈರಲ್
ಒಬ್ಬ ಸಿದ್ದರಾಮಯ್ಯ, ನಾಮ ಹಲವು ಪೋಸ್ಟರ್ ವಿಚಾರಕ್ಕೆ ಮಾತನಾಡಿದ ಅವರು, ಉದರನಿಮಿತ್ತಂ ಬಹುಕೃತವೇಷಂ, ವೋಟು ನಿಮಿತ್ತಂ ಬಹುಕೃತನಿಮಿತ್ತಂ. ವೋಟಿಕೋಸ್ಕರ ಹಲವು ವೇಷ ಹಾಕುತ್ತಿದ್ದಾರೆ ಅವರೇ ಒಪ್ಪಿಕೊಂಡಿದ್ದಾರೆ. ಘಳಿಗೆಗೊಂದು ರೀತಿ ಬದಲಾಗಬಾರದು, ನಿಯತ್ತು ಮತ್ತು ನೀತಿ ಒಂದೇ ಇರಬೇಕು. ನಿಯತ್ತು ಬದಲಾಗುವುದು ನೀತಿ ಬದಲಾಗುವುದು ಒಳ್ಳೆಯ ನೇತೃತ್ವದ ಲಕ್ಷಣ ಅಲ್ಲ. ಜಾತಿ ಸಭೆಯಲ್ಲಿ ಜಾತಿವಾದಿ ರೀತಿ, ಹೊರಗಡೆ ಜಾತ್ಯಾತೀತರಂತೆ ಮಾತಾನಾಡುವುದು. ಹಿಂದುತ್ವದ ವಿರುದ್ಧ ಮಾತಾನಾಡುವುದು, ಹೊರಗಡೆ ಬಂದು ಹಿಂದೂ ಎನ್ನುವುದು ನೀತಿ, ನಿಯತ್ತು ಇಲ್ಲದಿರುವುದನ್ನು ತೋರಿಸುತ್ತದೆ ಎಂದರು.