Advertisement
ಜೀವನ ಎಂಬುದು ಕೂತೂಹಲಗಳ ಶರಧಿ. ಜೀವನ ನಾವು ಅಂದುಕೊಂಡಂತೆ ಸಾಗುವುದಿಲ್ಲ, ಸಾಗಿದರೂ ಕೆಲವು ಸನ್ನಿವೇಶಗಳಿಗೆ ಮಾತ್ರ ಸೀವಿತ. ವಿಧಿ ನಿಯಮ-ನಿರ್ಧಾರಿತ ಬದುಕನ್ನು ವಿವೇಕ- ವಿವೇಚನೆಯಿಂದ ಮುನ್ನಡೆ ಸಿದರೆ ಬಾಳು ಹಸನು, ಇಲ್ಲವಾದಲ್ಲಿ ಹತಾಶೆ- ನಿರಾಶೆಗಳ ಸುರಿಮಳೆ.
Related Articles
Advertisement
“ನಿನ್ನೆಯ ಜೀವನ ಕತೆ, ನಾಳೆಯದು ಕಲ್ಪನೆ, ಇಂದಿನ ಜೀವನವೇ ಸತ್ಯ’ ಎಂಬುದನ್ನು ಇಲ್ಲಿ ಸಂವಾದಿಯಾಗಿ ತೆಗೆದುಕೊಳ್ಳುವುದು ಸಮುಚಿತ.
ನಿನ್ನೆಗಳನ್ನು ಮರೆತು ನಾಳಿನತ್ತ ಸುಳಿಯದೆ ಇಂದಿನತ್ತ/ಈ ಕ್ಷಣದತ್ತ ಮಾತ್ರ ಬಾಳನ್ನು ಕೇಂದ್ರೀಕೃತಗೊಳಿಸಿದಲ್ಲಿ ಅಂತಃಕರಣ ಪ್ರವೇಶಿಸಿ ಇಲ್ಲಿನ ಸೌಂದರ್ಯವನ್ನು ನಿತ್ಯ ಅನುಭವಿಸುತ್ತಾ ಸಾಗಿದರೆ ಬಾಹ್ಯ ಸೌಂದಯವೂ ಸುಂದರವಾಗಿ ಗೋಚರಿಸುವುದು. ಹೀಗಾದಲ್ಲಿ ಖನ್ನತೆಗಳ ಮಾತೆಲ್ಲಿ? ಹೋಲಿಕೆಯ ಬಾಳಿಗೆ ಚರಮಾಂಜಲಿ ಇಟ್ಟು ಸ್ವಂತಿಕೆಯ ವ್ಯಸನದತ್ತ ತೊಡಗಿದರೆ ಚಿಂತೆ-ವ್ಯಾಕುಲತೆಗಳ ಹಂಗು ಇರುವುದೇ?
ಇನ್ನು ಮನುಷ್ಯರ ಬದುಕು ಪ್ರಕೃತಿಯಂತೆ ರಮಣೀಯವಾಗಲು ಪ್ರಕೃತಿ ಏನು ತಾನೇ ಕೊಟ್ಟಿಲ್ಲ. ಕ್ಷಣಿಕ ಭೌತಿಕ ಸುಖದತ್ತ ಬೆಂಬೆತ್ತಿ ಹೊರಟ ಮಾನವನಿಗೆ ಪ್ರತ್ಯಕ್ಷವಾಗಿರುವ ಶಾಶ್ವತರೂಪ ತಾಳಿ ನಿತ್ಯನೂತನವಾಗಿರುವ ಪ್ರಕೃತಿಯ ಅಂತರಂಗ ಹೊಕ್ಕಿ ಆ ಸೌಂದರ್ಯವನ್ನು ಆಸ್ವಾದಿಸುವತ್ತ ಎಡವಿದ ಮಾನವನಿಗೆ ಇನ್ನು ಹೇಗೆ ಶಾಂತಿ ದೊರಕೀತು. ಈ ಜ್ಞಾನ ಈತನಿಗೆ ಮೂಡುವುದೆಂತು?
ಹೀಗೆ ದೈನಂದಿನ ಆಗು-ಹೋಗುಗಳ ಪುಟ್ಟ ಪುಟ್ಟ ಸಂಗತಿಗಳ ಸಹಿತ ಎಲ್ಲವುಗಳಲ್ಲಿ ಮೇಲೆ ವಿಶ್ಲೇಶಿಸಿದಂತೆ ಸಂತಸದ ಕ್ಷಣಗಳ, ಭರವಸೆಯ ದೊಂದಿಯ ಬೆಳಕಿನ ಮಾರ್ಗದಲ್ಲಿ ಸಾಗಿದರೆ ಬಾಳಿನ ಅನುಕ್ಷಣವನ್ನು ಆನಂದಿಸಲು ಸಾಧ್ಯವಾಗುತ್ತದೆ. ಆದರೆ ನಮ್ಮ ಪಯಣ ಮಾತ್ರ ಸದಾ ಈ ದಿಕ್ಕಿನತ್ತಿರಬೇಕು.
-ಸಂದೀಪ್ ನಾಯಕ್ ಸುಜೀರ್, ಮಂಗಳೂರು