ಹನೂರು: ಕಾಂಗ್ರೆಸ್ ನವರು ಹಿಜಡಾವಾದಿಗಳಂತೆ ದೇಶವನ್ನು ವಿಭಜಿಸುವುದೇ ಅವರ ಕೆಲಸ ಎಂದು ಬಿಹಾರದ ವಿಧಾನ ಪರಿಷತ್ ಮುಖ್ಯ ಸಚೇತಕ ದಿಲೀಪ್ ಕುಮಾರ್ ಜೈಸ್ವಾಲ್ ಆರೋಪಿಸಿದರು.
ಹನುರು ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿಲೀಪ್ ಕುಮಾರ್, ಜೈಸ್ವಾಲ್ ಆರ್ಟಿಕಲ್ 370 ರದ್ದು ಪಡಿಸಿದರೆ ಕಾಶ್ಮೀರದಲ್ಲಿ ಕಲ್ಲು ಹೊಡೆಯುತ್ತಾರೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದರು. ಆದರೆ ಮೋದಿ ಅವರು ಆರ್ಟಿಕಲ್ 370 ರದ್ದು ಪಡಿಸುವ ಮೂಲಕ ಪೌರುಷತ್ವ ಮೆರೆದಿದ್ದಾರೆ. ಕಾಂಗ್ರೆಸ್ ದೇಶವನ್ನು ಯಾವಾಗಲೂ ವಿಭಜಿಸುತ್ತಾರೆ ಎಂದು ಆರೋಪಿಸಿದರು.
ಹನೂರಿಗೆ ಎ.25ರ ಮಂಗಳವಾರ ಪ್ರಿಯಾಂಕ ಗಾಂಧಿ ಆಗಮಿಸುತ್ತಿದ್ದು ಅವರು ತಮ್ಮ ಭಾಷಣದಲ್ಲಿ ತಮ್ಮ ಪತಿ ರಾಬರ್ಟ್ ವಾಧ್ರಾರ ಭ್ರಷ್ಟಾಚಾರದ ಬಗ್ಗೆ ಭಾಷಣ ಮಾಡುತ್ತಾರೆಯೇ ಎಂದು ವ್ಯಂಗ್ಯವಾಡಿದರು.
ಈ ದೇಶದಲ್ಲಿ ಮಂದಿರಗಳನ್ನು ಮಸೀದಿಗಳನ್ನಾಗಿ ಮಾಡಲಾಗಿದೆ. ಆದರೆ ಒಂದೇ ಒಂದು ಮಸೀದಿಯನ್ನು ಮಂದಿರ ಮಾಡಿರುವುದನ್ನು ತೋರಿಸಲು ಸಾಧ್ಯವೇ? ಕ್ರಿಕೆಟ್ ನಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದರೆ ಭಾರತದಲ್ಲಿ ಪಟಾಕಿ ಸಿಡಿಸಲಾಗುತ್ತದೆ. ಭಾರತದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ ಪಾಕಿಸ್ತಾನದಲ್ಲಿ ಪಟಾಕಿ ಸಿಡಿಸಲಾಗುತ್ತದೆ. ಇದು ಕಾಂಗ್ರೆಸ್ ಮನಸ್ಥಿತಿ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಮಂಡಲದ ಅಧ್ಯಕ್ಷ ಸಿದ್ದಪ್ಪ, ಮುಖಂಡರಾದ ಶಿವಕುಮಾರ್ ವೃಷಭೇಂದ್ರ ಮಧು ಇನ್ನಿತರರಿದ್ದರು.