Advertisement

Hanur ಒಂಟಿ ಸಲಗ ಭೀತಿಯಲ್ಲಿ ಗ್ರಾಮಸ್ಥರು: ಕತ್ತಲಾಗುತ್ತಿದ್ದಂತೆ ಮನೆ ಸೇರಬೇಕು

03:22 PM Jun 08, 2023 | Team Udayavani |

ಹನೂರು: ಕತ್ತಲು ಕವಿಯುತ್ತಲೇ ಕಾಡಾನೆಯೊಂದು ಗ್ರಾಮಕ್ಕೆ ಆಗಮಿಸಿ ಮರ-ಗಿಡಗಳನ್ನು ನಾಶ ಮಾಡುತ್ತಿರುವ ಘಟನೆ ತಾಲೂಕಿನ ಕಾಡಂಚಿನ ಪೊನ್ನಾಚಿ ಮತ್ತು ಮರೂರು ಗ್ರಾಮಗಳಲ್ಲಿ ನಡೆಯುತ್ತಿದೆ.

Advertisement

ಕತ್ತಲು ಕವಿಯುತ್ತಿದ್ದಂತೆ ಗ್ರಾಮಕ್ಕೆ ಒಂಟಿ ಸಲಗ ಆಗಮಿಸಿ ಮನೆಯ ಮುಂಭಾಗ ಹಾಕಲಾಗಿರುವ ತೆಂಗಿನಮರ, ಹಲಸಿನಮರ ಮತ್ತು ಮಾವಿನ ಮರಗಳಿಗೆ ಹಾನಿಯುಂಟು ಮಾಡುತ್ತದೆ. ಜತೆಗೆ ಗ್ರಾಮಕ್ಕೆ ಅಳವಡಿಸಿರುವ ಕುಡಿಯುವ ನೀರಿನ ಪೈಪ್‌ಲೈನ್‌ಗಳು, ಜಮೀನುಗಳಲ್ಲಿನ ನೀರಾವರಿ ಪರಿಕರಗಳನ್ನು ಹಾಳು ಮಾಡುತ್ತಿದೆ.

ಇದನ್ನೂ ಓದಿ: Ramanagara : ಭೀತಿ ಮೂಡಿಸಿದ್ದ ಒಂಟಿ ಸಲಗ ಸೆರೆ ; ಕಾರ್ಯಾಚರಣೆ ಯಶಸ್ವಿ

ಸೂಕ್ತ ಕ್ರಮಕ್ಕೆ ಆಗ್ರಹ

ಕಳೆದ 3 ತಿಂಗಳಿನಿಂದಲೂ ಈ ಒಂಟಿ ಸಲಗ ನಿರಂತರವಾಗಿ ಗ್ರಾಮದತ್ತ ಆಗಮಿಸುತ್ತಿದ್ದು ಸಂಬಂಧಪಟ್ಟ ಅರಣ್ಯ ಇಲಾಖಾ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಸ್ಥರು 6 ಗಂಟೆಯಾಗುತ್ತಲೇ ಮನೆಯ ಒಳಗಡೆ ಸೇರಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಕರ‍್ಯ ನಿಮಿತ್ತ ನಗರ ಪ್ರದೇಶಗಳಿಗೆ ತೆರಳಿ ಬರುವುದು ತಡವಾದಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಗ್ರಾಮ ಸೇರಬೇಕಾದ ಪರಿಸ್ಥಿತಿಯಿದೆ. ಈ ಒಂಟಿ ಸಲಗದಿದ ಹೆಚ್ಚಿನ ಅನಾಹುತ ಸಂಭವಿಸುವ ಮುನ್ನವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮಸ್ಥರು ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next