Advertisement

Hanur; ಸಾಮೂಹಿಕ ವಿವಾಹದಲ್ಲಿ ವರನ ಪೇಟ ಸರಿಪಡಿಸಿದ ಸಿಎಂ ಸಿದ್ದರಾಮಯ್ಯ

07:29 PM Sep 27, 2023 | Team Udayavani |

ಹನೂರು: ಸಾಮೂಹಿಕ ವಿವಾಹ ಮಹೋತ್ಸವಕ್ಕೆ ವಧು-ವರರಿಗೆ ಮಾಂಗಲ್ಯ ಮತ್ತು ಬೆಳ್ಳಿ ಕಾಲುಂಗುರ ವಿತರಿಸುವ ವೇಳೆ ವರನಿಗೆ ಪೇಟ ಹಾಕಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೊಟ್ಟ ಸ್ವಾರಸ್ಯಕರ ಪ್ರಸಂಗ ಜರುಗಿತು.

Advertisement

ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ದೇವಸ್ಥಾನದ ರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವಕ್ಕೂ ಮುನ್ನ ನೂತನ ವಧು-ವರರಿಗೆ ಪ್ರಾಧಿಕಾರದವತಿಯಿಂದ ಮಾಂಗಲ್ಯ ಮತ್ತು ಬೆಳ್ಳಿ ಕಾಲುಂಗುರವನ್ನು ಮುಖ್ಯಮಂತ್ರಿಗಳು ವಿತರಿಸುತ್ತಿದ್ದರು. ಈ ವೇಳೆ ವರನೋರ್ವ ಪೇಟವನ್ನು ತಲೆಗೆ ಸಮರ್ಪಕವಾಗಿ ಹಾಕಿರಲಿಲ್ಲ. ಇದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವರನಿಗೆ ಪೇಟ ಹಾಕಿಕೊಳ್ಳುವ ಬಗ್ಗೆ ಹೇಳಿಕೊಟ್ಟುರು. ಮುಖ್ಯಮಂತ್ರಿಗಳೇ ಸ್ವತಃ ವರನ ಪೇಟವನ್ನು ಸರಿಮಾಡಿದರು. ಈ ವೇಳೆ ಸ್ಥಳದಲ್ಲಿದ್ದವರೆಲ್ಲ ಕೆಲಕಾಲ ನಗೆಗಡಲಲ್ಲಿ ತೇಲಿದ್ದು ಕಂಡುಬಂದಿತು.

ಸಾಲ ಮಾಡಿ ಅದ್ಧೂರಿ ಮದುವೆ ಮಾಡುವುದು ಅನಾರೋಗ್ಯಕಾರಿ. ವ್ಯವಸಾಯಕ್ಕೆಂದು ಸಾಲ ಮಾಡಿ ಮದುವೆ ಮಾಡುವುದನ್ನು ನಿಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.ಬಡವರು ಮತ್ತು ಮಧ್ಯಮ ವರ್ಗದವರ ಪಾಲಿಗೆ ಅದ್ದೂರಿ ಮದುವೆಗಳು ಬಹಳ ದೊಡ್ಡ ಹೊರೆಯಾಗುತ್ತವೆ. ಜೀವನ ಪರ್ಯಂತ ಸಾಲ ತೀರಿಸುತ್ತಾ ಕೂರಬೇಕಾಗುತ್ತದೆ. ಆದ್ದರಿಂದ ಸರಳ ಮತ್ತು ಸಾಮೂಹಿಕ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next