ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಕಲಾವಿದೆ ಹಣಮವ್ವ ಸಾಂತವ್ವ ಗಾಜಾರ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.
ದೇವದಾಸಿ ಕುಟುಂಬದಿಂದ ಬಂದ ಹಣಮವ್ವ ಅಭಿಜಾತ ಕಲಾವಿದೆ. ಬದುಕಿನ ನೋವು – ಸಂಕಟಗಳನ್ನು ಎದುರಿಸುತ್ತಲೆ ಕಲಾವಿದೆಯಾಗಿ ಬೆಳೆದವರು. ಒಂಬತ್ತನೇ ವಯಸ್ಸಿಗೆ ಬಣ್ಣ ಹಚ್ಚಿದವರು. ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿಯಲ್ಲಿ ಬಾಲ ನಟಿಯಾಗಿ, ನಾಯಕಿಯಾಗಿ, ಖಳ ನಾಯಕಿಯಾಗಿ, ಹಾಸ್ಯನಟಿಯಾಗಿ ಪಾತ್ರಗಳಿಗೆ ಜೀವ ತುಂಬಿದವರು.
ಇದನ್ನೂ ಓದಿ:ತೆಂಡೂಲ್ಕರ್ “ಭಾರತ ರತ್ನ”ಕ್ಕೆ ಅರ್ಹರಲ್ಲ : RJD ಉಪಾಧ್ಯಕ್ಷರ ವಿವಾದಾತ್ಮಕ ಹೇಳಿಕೆ
ಮೂರು ದಿನದ ಸಂತೆ, ಅಣ್ಣ ಕೊಟ್ಟ ಮಾಂಗಲ್ಯ, ಗೌರಿ ಗೆದ್ದಳು, ಚಿನ್ನದ ಗೊಂಬೆ ಹೀಗೆ ನೂರಾರು ನಾಟಕಗಳಲ್ಲಿ ಅಭಿನಯಿಸಿ ಬಿಜಾಪುರ, ಬಾಗಲಕೋಟೆ, ಗದಗ ಜಿಲ್ಲೆಯ ಅಸಂಖ್ಯ ಹಳ್ಳಿಗಳನ್ನು ಸುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ರತ್ನಾಗಿರಿ, ಸೊಲ್ಲಾಪುರ, ಜತ್ತ, ಶ್ರೀಶೈಲಗಳಲ್ಲೂ ಹಣುಮವ್ವನವರ ರಂಗಯಾತ್ರೆ ನೆಡದಿದೆ. ಇಷ್ಟೇ ಅಲ್ಲದೆ ಚೌಡಕಿ ಪದಗಳ ಗಾಯನದಲ್ಲೂ ಹಣಮವ್ವ ಸಾಧನೆ ಮಾಡಿದ್ದಾರೆ.