Advertisement

ಸ್ವಗ್ರಾಮಗಳಲ್ಲಿ ಹನುಮಂತರಾಯಪ್ಪ, ರಂಗಪ್ಪ ಅಂತ್ಯಕ್ರಿಯೆ

10:02 AM Apr 26, 2019 | Lakshmi GovindaRaju |

ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ಸಂಭವಿಸಿದ ಸರಣಿ ಬಾಂಬ್‌ ನ್ಪೋಟದಲ್ಲಿ ಮೃತಪಟ್ಟ ಜೆಡಿಎಸ್‌ ಮುಖಂಡರಾದ ಪೀಣ್ಯದ 8ನೇ ಮೈಲಿಯ ಹನುಮಂತರಾಯಪ್ಪ ಮತ್ತು ಚೊಕ್ಕಸಂದ್ರದ ರಂಗಪ್ಪ ಅವರ ಮೃತದೇಹಗಳು ಬುಧವಾರ ಮುಂಜಾನೆ ಐದು ಗಂಟೆ ಸುಮಾರಿಗೆ ನಗರಕ್ಕೆ ಬಂದಿದ್ದು, ನಂತರ ಕಾನೂನು ಪ್ರಕ್ರಿಯೆ ಮುಗಿಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು.

Advertisement

ಆ್ಯಂಬುಲೆನ್ಸ್‌ಗಳ ಮೂಲಕ ಮೃತದೇಹಗಳನ್ನು ಮೃತರ ನಿವಾಸಿಗಳಿಗೆ ಕೊಂಡೊಯ್ಯಲಾಯಿತು. ಈ ವೇಳೆ ಮನೆ ಮುಂದೆ ಜಮಾಯಿಸಿದ್ದ ಜೆಡಿಎಸ್‌ ಕಾರ್ಯಕರ್ತರು, ಅಭಿಮಾನಿಗಳು, ಸಂಬಂಧಿಕರು ಹಾಗೂ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ಹನುಮಂತರಾಯಪ್ಪ ಅವರ ಮೃತದೇಹವನ್ನು ಪೀಣ್ಯದ 8ನೇ ಮೈಲಿಯಲ್ಲಿರುವ ಅವರ ಸ್ವಗೃಹದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ನೆಲಮಂಗಲದ ಬೂದಾಳುನಲ್ಲಿ ಕೆಲ ಹೊತ್ತು ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಅನಂತರ ಅಲ್ಲಿಯೇ ಅಂತ್ಯಸಂಸ್ಕಾರ ನಡೆಯಿತು ಎಂದು ಅವರ ಆಪ್ತರು ತಿಳಿಸಿದರು.

ರಂಗಪ್ಪ ಅವರ ಕಳೇಬರವನ್ನು ವಿದ್ಯಾರಣ್ಯಪುರದಲ್ಲಿರುವ ಅವರ ನಿವಾಸದ ಮುಂಭಾಗ ಕೆಲ ಹೊತ್ತ ಇರಿಸಿ, ಬಳಿಕ ಯಲಹಂಕ ಕೋಗಿಲು ಬಳಿಯೂ ಅವಕಾಶ ನೀಡಲಾಗಿತ್ತು. ಅನಂತರ ಚೊಕ್ಕಸಂದ್ರದಲ್ಲಿರುವ ಅವರ ಜಮೀನಿನಲ್ಲಿಯೇ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next