Advertisement
ಕಿಷ್ಕಿಂಧಾ ಅಂಜನಾದ್ರಿ ಪ್ರದೇಶದಲ್ಲಿರುವ ಏಳು ಬೆಟ್ಟಗಳಲ್ಲಿ ಅಂಜನಾದ್ರಿ ಪ್ರಾಕೃತಿಕವಾಗಿ ಮುಂದಿನ ಭಾಗ ಹನುಮಂತ ಮುಖವನ್ನು ಹೋಲುತ್ತಿದೆ. ಬಾಲಾಂಜನೇಯ ಚಿಕ್ಕಂದಿನಲ್ಲಿ ಸೂರ್ಯ ದೇವನನ್ನು ಕೆಂಪಾದ ಹಣ್ಣು ಎಂದು ತಿಳಿದು ತಿಂದ ರೀತಿಯಲ್ಲಿ ಇಡೀ ಬೆಟ್ಟಕ್ಕೆ ಅಳವಡಿಸಿರುವ ವಿದ್ಯುತ್ ದೀಪಗಳು ಕಾಣುತ್ತಿವೆ. ದೂರದ ಹೊಸಪೇಟೆ, ಕಮಲಾಪೂರ,ಜಿಂದಾಲ್ ಹಾಗೂ ಸುತ್ತಲಿನ ಊರುಗಳ ಜನರು ಅಂಜನಾದ್ರಿ ಗೆ ಅಳವಡಿಸಿರುವ ವಿದ್ಯುತ್ ದೀಪಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇದೇ ಮೊದಲ ಭಾರಿಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ.ಪೂರ್ವ ಸಿದ್ದತೆ ಸಭೆಯ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಹಾಗೂ ಶಾಸಕ ಗಾಲಿ ಜನಾರ್ದನರೆಡ್ಡಿ ಮೂರು ದಿನಗಳ ಕಾಲ ಇಡೀ ಬೆಟ್ಟಕ್ಕೆ ವಿದ್ಯುತ್ ಅಲಂಕಾರ ಮಾಡಲು ಸೂಚನೆ ನೀಡಿದ್ದರು.
ಗಂಗಾವತಿ ಜರುಗಿದ ಹನುಮಮಾಲಾ ಸಂಕೀರ್ತನಾ ಯಾತ್ರೆಯನ್ನು ಪೊಲೀಸ್ ಇಲಾಖೆ ಶಿಸ್ತು ಹಾಗೂ ಶಾಂತಿಯಿಂದ ಯಶಸ್ವಿಯಾಗಿ ನಡೆಸಿದ್ದು ಹನುಮಮಾಲಾಧಾರಿಗಳು ಹಾಗೂ ಸಾರ್ವಜನಿಕರು ಪ್ರಶಂಸೆ ಮಾಡುತ್ತಿದ್ದಾರೆ.