ಕಲಬುರಗಿ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂದ ಆನೆಗುಂದಿ ಅಂಜನಾದ್ರಿ ಬೆಟ್ಟಕ್ಕೆ ನೂರಾರು ಹನುಮಾ ಮಾಲಾಧಾರಿಗಳು ರವಿವಾರ ಪ್ರಯಾಣ ಬೆಳೆಸಿದರು.
ವಿಶ್ವ ಹಿಂದೂ ಪರಿಷತ್ ಬಜರಂಗದಳ ಕರ್ನಾಟಕ ಉತ್ತರ ಕರ್ನಾಟಕದ ವತಿಯಿಂದ ಹನುಮ ಮಾಲಾ ಕಾರ್ಯಕ್ರಮದ ನಿಮಿತ್ತ ಜಿಲ್ಲೆಯಿಂದ ಅಂಜನಾದ್ರಿ ಪರ್ವತಕ್ಕೆ ಪ್ರಯಾಣ ಬೆಳೆಸಲಾಯಿತು.
ನಗರದ ನೆಹರೂ ಗಂಜ್ ಪ್ರದೇಶದ ಹನುಮಾನ ಮಂದಿರದಲ್ಲಿ ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ರವಿವಾರ ನಸುಕಿನ ಜಾವ ಹನುಮಂತನಿಗೆ ರುದ್ರಾಭಿಷೇಕ, ಹೋಮ ಹವನ,ನವಗ್ರಹ ಪೂಜೆಯ ನಂತರ 450 ಜನ ಹನುಮ ಮಾಲಾಧಾರಿಗಳಿಗೆ ಮಾಲಾಧಾರಣೆ ಮಾಡಲಾಯಿತು.
ಇದನ್ನೂ ಓದಿ:ಹೊಂಬಾಳೆ ಫಿಲ್ಮ್ಸ್ ನ ಕೀರ್ತಿ ಸುರೇಶ್ ಅಭಿನಯದ ಚಿತ್ರದ ಪೋಸ್ಟರ್ ಅನಾವರಣ
Related Articles
ಕಲಬುರಗಿ ನಗರದ ನೆಹರೂ ಗಂಜ್ ಪ್ರದೇಶದಿಂದ 11 ಬಸ್, ಗಳಿಗೆ ಚಂದು ಪಾಟೀಲ್ ಚಾಲನೆ ನೀಡಿದರು. ತದನಂತರ ಮಾಲಾಧಾರಿಗಳ ಪ್ರಯಾಣ ಕೊಪ್ಪಳಕ್ಕೆ ಪ್ರಯಾಣ ಬೆಳೆಸಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ವಿಭಾಗದ ಕಾರ್ಯದರ್ಶಿ ಶಿವರಾಜ್ ಸಂಗೋಳಗಿ, ಜಿಲ್ಲಾ ಅಧ್ಯಕ್ಷ ರಾಜು ನವಲದಿ, ಪ್ರಶಾಂತ್ ಗುಡ್ಡಾ, ಅಶ್ವಿನ ಕುಮಾರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಾಲಾಧಾರಿಗಳು ಕಲಬುರಗಿಯಿಂದ ಕೊಪ್ಪಳದ ಗವಿ ಸಿದ್ದೇಶ್ವರ ಸಂಸ್ಥಾನಕ್ಕೆ ತೆರಳಿ, ವಿಶ್ರಾಂತಿ ಪಡೆದು ಬೆಳಿಗ್ಗೆ ಪೂಜೆಯ ನಂತರ ಕಿಷ್ಕಿಂದ ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳಸಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.