Advertisement
ರಾಜ್ಯದ ನಾನಾ ಕಡೆಯಿಂದ ಕೊರೆಯುವ ಚಳಿಯನ್ನು ಲೆಕ್ಕಿಸದೇ ಅಂಜನಾದ್ರಿ ಬೆಟ್ಟದಲ್ಲಿ ಸಹಸ್ರಾರು ಸಂಖ್ಯೆಯಲ್ಲಿಮಾಲಾಧಾರಿಗಳು ವಾಸ್ತವ್ಯ ಹೂಡಿದ್ದರು. ಬೆಳಗ್ಗೆ 4 ಗಂಟೆಗೆ ವಿನಾಯಕ ಅಗ್ನಿಹೋತ್ರಿ ನೇತೃತ್ವದ ತಂಡದ ಸದಸ್ಯರು ಪವಮಾನ ಹೋಮ ಮತ್ತು ಮನ್ಯೂ ಸೂಕ್ತ ಹೋಮ ನೆರವೇರಿಸಲಾಯಿತು.
ವಿಸರ್ಜನೆ ಮಾಡಿ, ಹನುಮಂತ ದೇವರಲ್ಲಿ ಪ್ರಾರ್ಥಿಸಿದರು. ಬೆಳಗ್ಗೆಯಿಂದ ಪ್ರಾರಂಭಗೊಂಡ ಮಾಲೆ ವಿಸರ್ಜನೆ ಕಾರ್ಯ
ಸಂಜೆಯವರೆಗೆ ನಡೆಯಿತು. ಸುಮಾರು 27 ಸಾವಿರ ಮಾಲಾಧಾರಿಗಳು ಮಾಲೆ ವಿಸರ್ಜನೆ ಮಾಡಿದರು.
Related Articles
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಹಿರೇಮಠ್…, ವರ್ಷದಿಂದ
ವರ್ಷಕ್ಕೆ ಮಾಲಾಧಾರಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಪ್ರಸಕ್ತ ವರ್ಷ 25 ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳು ಬೆಟ್ಟಕ್ಕೆ
ಆಗಮಿಸಿ, ಭಕ್ತಿ ಸಮರ್ಪಿಸಿದ್ದಾರೆ. ಧಾರ್ಮಿಕ ಮತ್ತು ದತ್ತಿ ಇಲಾಖೆ ಅಧಿಕಾರಿಗಳು ಅತ್ಯಂತ ಕಾಳಜಿ ವಹಿಸಿ, ಮಾಲಾಧಾರಿಗಳಿಗೆ
ಭೋಜನ ವ್ಯವಸ್ಥೆ, ಭಕ್ತರಿಗೆ ದರ್ಶನದ ವ್ಯವಸ್ಥೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಅಧಿಕಾರಿಗಳು
ಸ್ಥಳದಲ್ಲಿ ಸೂಕ್ತ ಭದ್ರತೆ ಒದಗಿಸಿ ಮಾಲಾ ವಿಸರ್ಜನೆಗೆ ಅವಕಾಶ ಕಲ್ಪಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು. ಈ ವೇಳೆ ವಿಶ್ವ
ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಕೇಶವ ಹೆಗಡೆ, ಅಖೀಲ ಭಾರತ ಸಂಘಟನಾ ಕಾರ್ಯದರ್ಶಿ ಮಿಲೀಂದ
ಪರಾಂಡೆ, ಭಜರಂಗ ದಳದ ರಾಷ್ಟ್ರೀಯ ಕಾರ್ಯದರ್ಶಿ ಸೂರ್ಯನಾರಾಯಣ, ವಿಎಚ್‌ಪಿಯ ಆನಂದ್ ಕೃಷ್ಣ, ಅನಿಲ್ ಜೋಶಿ, ರೇವಣಸಿದ್ದಪ್ಪ, ಸುನೀಲ್, ರಮೇಶ್, ಗುದ್ಲಿ ಪರುಶರಾಮ್, ಬಸವರಾಜ್ ನಾಲತ್ವಾಡ್, ರಮೇಶ್ ಗುಜ್ಜಲ್ ಇನ್ನಿತರರಿದ್ದರು.
Advertisement
ಪವಮಾನ ಹೋಮ: ಹಂಪಿಯ ಆನೆಗುಂದಿಯ ಆಂಜನಾದ್ರಿ ಬೆಟ್ಟದಲ್ಲಿ ಶುಕ್ರವಾರ ಪವಮಾನ ಹೋಮ ನಡೆಯಿತು.ನಗರದ ಹನುಮ ಮಾಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪವಮಾನ ಹೋಮದಲ್ಲಿ ಸಹಸ್ರಾರು ಹನುಮ ಮಾಲಾಧಾರಿಗಳು
ಪೂಜೆ ಸಲ್ಲಿಸಿದರು. ಅಪ್ಪರಾವ್ ಸಾನಬಾಳ್, ಸಂದೀಪ್‌ಸಿಂಗ್ , ಗೋವಿಂದ್ ಕುಲಕರ್ಣಿ ನೇತೃತ್ವದಲ್ಲಿ ಮಾಲಾಧಾರಿಗಳ
ಮಾಲಾ ವಿಸರ್ಜನಾ ಕಾರ್ಯಕ್ರಮ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದ ಬಳಿಕ ಸಂಪನ್ನವಾಯಿತು.