Advertisement
ನಗರದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮುಂಜಾನೆಯಿಂದಲೇ ಹನುಮ ಯಜ್ಞ ನಡೆಸಲಾಯಿತು. ದೇವಾಲಯದಲ್ಲಿ ಮಾದಹಳ್ಳಿಯ ಸಾಂಬಸದಾಶಿವ ಸ್ವಾಮೀಜಿ, ಗಾವಡಗೆರೆ ನಟರಾಜಸ್ವಾಮೀಜಿ ಸಾನ್ನಿಧ್ಯದಲ್ಲಿಅಭಿಷೇಕ, ವಿಶೇಷ ಪೂಜೆ ನಡೆಸಲಾಯಿತು. ಈ ವೇಳೆ ಶಾಸಕರಾದ ಎಚ್.ಪಿ.ಮಂಜುನಾಥ್, ಎಚ್. ವಿಶ್ವನಾಥ್, ಸಂಸದ ಪ್ರತಾಪಸಿಂಹ, ಹನುಮಂತೋತ್ಸವ ಸಮಿತಿ ಗೌರವಾಧ್ಯಕ್ಷ ಯೋಗಾನಂದಕುಮಾರ್, ಅಧ್ಯಕ್ಷ ವಿ.ಎನ್.ದಾಸ್ ಭಾಗವಹಿಸಿದ್ದರು.
Related Articles
Advertisement
ಕೆ.ಆರ್.ನಗರ: ಪಟ್ಟಣದ ಆಂಜನೇಯ ಬಡಾವಣೆಯ ಮಾರುತಿ ಯುವಕರ ಸಂಘದ ವತಿಯಿಂದ ಹನುಮ ಜಯಂತ್ಯುತ್ಸವವನ್ನು ಕೋವಿಡ್ ಹಿನ್ನೆಲೆ ಸರಳವಾಗಿ ನಡೆಸಲಾಯಿತು.
ಮಾರುತಿ ಯುವಕರ ಸಂಘದ ಅಧ್ಯಕ್ಷ ಗೌತಮ್‌ಜಾಧವ್ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ನಡೆದ ಹನುಮೋತ್ಸವಕ್ಕೆ ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸಭಟ್ಟ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಶಾಸಕ ಸಾ.ರಾ.ಮಹೇಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಡಿ.ರವಿಶಂಕರ್, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್ ಸೇರಿದಂತೆ ಮತ್ತಿತರರ ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಜಯಂತಿ ಅಂಗವಾಗಿ ದೇವಾಲಯಕ್ಕೆ ಪುಷ್ಪಾಲಂಕಾರ ಮತ್ತು ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸಂಜೆ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.ಮೆರವಣಿಗೆಯಲ್ಲಿ ಪಾಲ್ಗೊಂ ಡಿದ್ದ ಭಕ್ತಗಣ ಕೇಸರಿ ಶಾಲು, ರುಮಾಲು ಧರಿಸಿ ಬಾವುಟವನ್ನು ಹಿಡಿದು ದೇವರ ನಾಮ ಜಪಿಸುತ್ತಾ ಕುಣಿದು ಕುಪ್ಪಳಿಸಿ ಭಕ್ತಿಯ ಪರಾಕಾಷ್ಠೆ ತೋರಿದರು. ದೇವಾಲಯದ ಭಕ್ತರು ಆಂಜನೇಯ ಸ್ವಾಮಿಗೆ ಹಾಲಿನ ಮತ್ತು ಪಂಚಾಮೃತ ಅಭಿಷೇಕ ನೆರವೇರಿಸಿದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಪಾನಕ, ಮಜ್ಜಿಗೆ, ಪ್ರಸಾದ, ಅನ್ನ ಸಂತರ್ಪಣೆ ನಡೆಯಿತು.ಈ ವೇಳೆ ಮಾರುತಿ ಯುವಕರ ಸಂಘದ ಕಾರ್ಯದರ್ಶಿ ಮಂಜುಕೆಂಚಿ, ಪದಾಧಿಕಾರಿಗಳಾದ ಎಸ್.ಯೋಗಾನಂದ, ದರ್ಶನ್, ಐ.ಟಿ.ಸುನೀಲ್, ನಿತೀಶ್‌ಪಾಂಡೆ, ವಿನಯ್, ಪುನೀತ್, ಮನು, ಪುಟ್ಟಸ್ವಾಮಿ, ಮಂಜುನಾಥ್ ಮತ್ತಿತರರು ಹಾಜರಿದ್ದರು.