Advertisement

ಹನೂರು : ಮನೆಯಲ್ಲಿ ಅಕ್ರಮ ಗಾಂಜಾ ಸಂಗ್ರಹ : ಮಹಿಳೆಯ ಬಂಧನ

10:55 PM Jun 12, 2022 | Team Udayavani |

ಹನೂರು : ಅಕ್ರಮವಾಗಿ ಮನೆಯಲ್ಲಿ ಗಾಂಜಾ ಸಂಗ್ರಹಣೆ ಮಾಡಿದ್ದ ಮಹಿಳೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ಮಹದೇವಮ್ಮ ಎಂಬಾಕೆಯೇ ಬಂಧಿತ ಆರೋಪಿಯಾಗಿದ್ದು, ಈಕೆ ಮನೆಯಲ್ಲಿ ಗಾಂಜಾ ಸಂಗ್ರಹಣೆ ಮಾಡಿ ರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದೆ. ಮಾಹಿತಿಯನ್ವಯ ಡಿವೈಎಸ್ಪಿ ನಾಗರಾಜು ನೇತೃತ್ವದಲ್ಲಿ ದಾಳಿ ನಡೆಸಿದ ಹನೂರು ಪೊಲೀಸರ ತಂಡ ಮಹಿಳೆಯನ್ನು ಬಂಧಿಸಿ 140 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ದಾಳಿಯಲ್ಲಿ ಹನೂರು ವೃತ್ತನಿರೀಕ್ಷಕ ಸಂತೋಷ್ ಕಶ್ಯಪ್ ಮುಖ್ಯಪೇದೆ ರಾಘವೇಂದ್ರ ಮಹಿಳಾ ಪೇದೆ ಶೋಭಾ ಹಾಗೂ ಇನ್ನಿತರರು ಭಾಗವಹಿಸಿದ್ದರು

ಇದನ್ನೂ ಓದಿ : ಕ್ಲಾಸೆನ್‌ ಟಾಪ್‌ ಕ್ಲಾಸ್‌ ಬ್ಯಾಟಿಂಗ್‌; ಭಾರತಕ್ಕೆ ಸತ‌ತ ಎರಡನೇ ಸೋಲು

Advertisement

Udayavani is now on Telegram. Click here to join our channel and stay updated with the latest news.

Next