ಬಳ್ಳಾರಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಜ. 26ರ ಗಣರಾಜ್ಯೋತ್ಸವದಂದು ನಡೆಯುವ ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ, ವಿಶ್ವದ ನೋಡಲೇಬೇಕಾದ ಪ್ರವಾಸಿ ತಾಣಗಳಲ್ಲಿ ಎರಡನೇ ಸ್ಥಾನಗಳಿಸಿರುವ ಹಂಪಿ ಸ್ಮಾರಕಗಳು ಪ್ರದರ್ಶನಗೊಳ್ಳಲಿವೆ. ಹಂಪಿ ಕೇಂದ್ರ ಬಿಂದು ಎನಿಸಿರುವ ಉಗ್ರ ನರಸಿಂಹ, ಭಗವಾನ್ ಹನುಮನ ಜನ್ಮ ಸ್ಥಳ ಎಂದು ಹೇಳಲಾದ ಅಂಜನಾದ್ರಿ ಬೆಟ್ಟ, ವಿಜಯನಗರ ಸಾಮ್ರಾಜ್ಯದ ಸರ್ವಶ್ರೇಷ್ಠ ಸಾಮ್ರಾಟ ಶ್ರೀಕೃಷ್ಣದೇವರಾಯರ 1509 ರಲ್ಲಿ ನಡೆದ ಪಟ್ಟಾಭಿಷೇಕ ಸಮಾರಂಭ ಹಾಗೂ ಹಜಾರರಾಮ ದೇವಾಲಯದ ಭಿತ್ತಿಚಿತ್ರಗಳನ್ನು ಈ ಸ್ತಬ್ಧ ಚಿತ್ರವು ಬಿಂಬಿಸುತ್ತಿದ್ದು, ಮೆರವಣಿಗೆಯಲ್ಲಿ ಪ್ರದರ್ಶನಗೊಂಡು ಜನಾಕರ್ಷಣೆಗೊಳ್ಳಲಿವೆ.
ಓದಿ : ಘಾಟ್‌ಕೋಪರ್ ಶ್ರೀ ಭವಾನಿ ಶನೀಶ್ವರ ದೇವಸ್ಥಾನ: ವಾರ್ಷಿಕ ಮಹಾಪೂಜೆ
ಕರ್ನಾಟಕದ ಡೆಕ್ಕನ್ ಪ್ರಸ್ಥಭೂಮಿಯ ತುಂಗಭದ್ರಾ ನದಿಯ ದಡದಲ್ಲಿ ಪ್ರವರ್ಧಮಾನಕ್ಕೆ ಬಂದ ವಿಜಯನಗರ ಸಾಮ್ರಾಜ್ಯದ ರಾಜಧಾನಿ ವಿಜಯನಗರ ಸಂಗಮ ರಾಜವಂಶದ ಹರಿಹರ-1 ಮತ್ತು ಬುಕ್ಕರಾಯ-1 ಇಬ್ಬರು ಸೋದರರು ಈ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಸಂಗಮ ವಂಶದವರು ತಮ್ಮ ಆಡಳಿತದ ಉತ್ತುಂಗದ ಅವಧಿಯಲ್ಲಿ ದಕ್ಷಿಣ ಭಾರತದ ಬಹುತೇಕ ಕುಟುಂಬಗಳು ಹಾಗೂ ಡೆಕ್ಕನ್ ಪ್ರಾಂತ್ಯದ ಸುಲ್ತಾನರನ್ನು ತಮ್ಮ ಅ ಧೀನಕ್ಕೆ ತೆಗೆದುಕೊಂಡಿದ್ದರು.
ದಕ್ಷಿಣ ಭಾರತದ ಎಲ್ಲೆಡೆ ಬಹುತೇಕ ಸ್ಮಾರಕಗಳಿರುವ, ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ವತಿಯಿಂದ ವಿಶ್ವ ಪರಂಪರೆಯ ಸ್ಥಳ ಎಂದು ಗುರುತಿಸಲ್ಪಟ್ಟಿರುವ, ಅತ್ಯಂತ ಪ್ರಸಿದ್ಧವಾದ ಹಾಗೂ ಇದೀಗ ಅವಶೇಷಗಳ ತಾಣವಾಗಿರುವ ಹಂಪಿ ಈ ಸಾಮ್ರಾಜ್ಯದ ಪರಂಪರೆಯಾಗಿದೆ. ಐರೋಪ್ಯ, ಪರ್ಷಿಯಾ ಪ್ರವಾಸಿಗರ ಕಥನಗಳು, ಪುರಾತತ್ವ ಉತ್ಪನ್ನನಗಳು ವಿಜಯನಗರ ಸಾಮ್ರಾಜ್ಯದ ಶಕ್ತಿ ಮತ್ತು ಶ್ರೀಮಂತಿಕೆಯನ್ನು ಬಹಿರಂಗಪಡಿಸುತ್ತವೆ. ಪರ್ಷಿಯಾ ಮತ್ತು ಪೋರ್ಚುಗಲ್‌ನಿಂದ ವ್ಯಾಪಾರಸ್ಥರನ್ನು ಆಕರ್ಷಿಸುತ್ತಿದ್ದ ಹಂಪಿ-ವಿಜಯನಗರವು, 1500 ನೇ ಇಸವಿಯಲ್ಲಿ ಬೀಜಿಂಗ್‌ನ
ನಂತರ, ವಿಶ್ವದ ಅತೀ ದೊಡ್ಡ ಹಾಗೂ ಭಾರತದ ಅತ್ಯಂತ ಸಿರಿವಂತ ಮಧ್ಯ ಕಾಲೀನ ಯುಗದ ನಗರಿಯಾಗಿತ್ತು ಎಂದು ಇತಿಹಾಸ ತಿಳಿಸುತ್ತದೆ.
ಓದಿ : ಬಿಎಸ್‌ವೈ-ಈಶ್ವರಪ್ಪ ರಾಜೀನಾಮೆ ನೀಡಲಿ