ಬೀಜಿಂಗ್: ವರ್ಷಾಂತ್ಯ ಚೀನದ ಹಾಂಗ್ಜೂನಲ್ಲಿ ನಡೆಯಬೇಕಿದ್ದ ಏಷ್ಯನ್ ಪ್ಯಾರಾ ಗೇಮ್ಸ್ ಕೋವಿಡ್-19 ಕಾರಣದಿಂದ ಮುಂದೂಡಲ್ಪಟ್ಟಿದೆ.
ಸಂಘಟನ ಸಮಿತಿ ಮಂಗಳವಾರ ಇದನ್ನು ಅಧಿಕೃತವಾಗಿ ಪ್ರಕಟಿಸಿತು. ಕೂಟದ ಮುಂದಿನ ದಿನಾಂಕವನ್ನು ಪ್ಯಾರಾ ನ್ಪೋರ್ಟ್ಸ್ ಕ್ಯಾಲೆಂಡರನ್ನು ಅವಲೋಕಿಸಿ ನಿಗದಿಪಡಿಸಲಾಗುವುದು ಎಂದಿದೆ.
“ಅಕ್ಟೋಬರ್ 9ರಿಂದ 15ರ ತನಕ ಹಾಂಗ್ಜೂನಲ್ಲಿ ನಡೆಯಬೇಕಿದ್ದ ಏಷ್ಯನ್ ಪ್ಯಾರಾ ಗೇಮ್ಸನ್ನು ಕೋವಿಡ್ ಕಾರಣದಿಂದ ಮುಂದೂಡಲಾಗಿದೆ’ ಎಂದು ಸಮಿತಿ ಪ್ರಕಟಿಸಿದೆ.
ಸೆಪ್ಟಂಬರ್ 10ರಿಂದ 25ರ ತನಕ ಇಲ್ಲೇ ನಡೆಯಬೇಕಿದ್ದ ಏಷ್ಯಾಡ್ ಕೂಟವನ್ನು ಮುಂದೂಡಿದ ಎರಡು ವಾರಗಳಲ್ಲಿ ಏಷ್ಯನ್ ಪ್ಯಾರಾ ಕೂಟವನ್ನೂ ಮುಂದೂಡಿದಂತಾಗಿದೆ.
Related Articles
ಮೇ 2ರಂದು ಏಷ್ಯಾಡ್ ಪಂದ್ಯಾವಳಿಯನ್ನು ಮುಂದೂಡಲಾದ ಪ್ರಕಟನೆ ಹೊರಬಿದ್ದಿತ್ತು.
ಪ್ಯಾರಾ ಗೇಮ್ಸ್ನಲ್ಲಿ 4 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು 22 ಕ್ರೀಡೆಗಳಲ್ಲಿ ಭಾಗವಹಿಸಬೇಕಿತ್ತು. ಒಟ್ಟು 616 ಪದಕಗಳ ವಿಲೇವಾರಿ ಆಗಬೇಕಿತ್ತು.