Advertisement

ಹ್ಯಾಂಗ್‌ಝೂ ಏಷ್ಯನ್‌ ಗೇಮ್ಸ್‌ ಫುಟ್‌ಬಾಲ್‌: “ಎ’ ಬಣದಲ್ಲಿ ಭಾರತ

11:03 PM Jul 27, 2023 | Team Udayavani |

ಹ್ಯಾಂಗ್‌ಝೂ: ಹ್ಯಾಂಗ್‌ಝೂ ಏಷ್ಯನ್‌ ಗೇಮ್ಸ್‌ನ ಫುಟ್‌ಬಾಲ್‌ ಸ್ಪರ್ಧೆಯ ಡ್ರಾ ಗುರುವಾರ ನಡೆದಿದೆ. ಭಾರತೀಯ ಪುರುಷರ ತಂಡವು ಚೀನ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ ಜತೆ “ಎ’ ಬಣದಲ್ಲಿದ್ದರೆ ವನಿತಾ ತಂಡವು ಥಾಯ್ಲೆಂಡ್‌ ಮತ್ತು ಚೈನೀಸ್‌ ತೈಪೆ ಜತೆ “ಬಿ’ ಬಣದಲ್ಲಿದೆ.
ಆಯ್ಕೆ ಮಾನದಂಡದಲ್ಲಿ ಕೇಂದ್ರ ಸರಕಾರವು ವಿನಾಯಿತಿ ನೀಡಿದ್ದರಿಂದ ಫ‌ುಟ್‌ಬಾಲ್‌ ಸ್ಪರ್ಧೆಯಲ್ಲಿ ಭಾರತೀಯ ತಂಡವು ಭಾಗವಹಿಸುವುದು ದೃಢಪಟ್ಟಿತು. ಏಷ್ಯಾದಲ್ಲಿ ಅಗ್ರ 8 ಸ್ಥಾನದಲ್ಲಿರದ ಕಾರಣಕ್ಕೆ ಭಾರತೀಯ ತಂಡಗಳಿಗೆ ಐಒಎ ಪ್ರವೇಶ ನಿರಾಕರಿಸಿತ್ತು. ಇದಕ್ಕೆ ಅ.ಭಾ. ಫ‌ುಟ್‌ಬಾಲ್‌ ಫೆಡರೇಶನ್‌ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರಕ್ಕೆ ಮನವಿ ಮಾಡಿತ್ತು.

Advertisement

ಪುರುಷರ ಸ್ಪರ್ಧೆಯಲ್ಲಿ ಆರು ಬಣಗಳಿವೆ. ಪ್ರತಿ ಬಣದ ಅಗ್ರ ಎರಡು ತಂಡಗಳು ಮತ್ತು ಮೂರನೇ ಸ್ಥಾನದಲ್ಲಿರುವ ಉತ್ತಮ ನಾಲ್ಕು ತಂಡಗಳು ಅಂತಿಮ 16ರ ಸುತ್ತಿಗೇರಲಿವೆ. ಮಹಿಳೆಯರ ಸ್ಪರ್ಧೆಯಲ್ಲಿ ಪ್ರತಿ ಬಣದ ಅಗ್ರ ತಂಡ ಮತ್ತು ಮೂರನೇ ಸ್ಥಾನದಲ್ಲಿರುವ ಉತ್ತಮ ಮೂರು ತಂಡಗಳು ಕ್ವಾರ್ಟರ್‌ಫೈನಲಿಗೇರಲಿವೆ.

ಆತಿಥೇಯ ಚೀನ ನಮ್ಮ ಪಾಲಿಗೆ ಸ್ಪರ್ಧಾತ್ಮಕ ಪಂದ್ಯವಾಗಿರಲಿದೆ. ಈ ಪಂದ್ಯದ ಫ‌ಲಿತಾಂಶದ ಮೂಲಕ ಣದ ವಿಜೇತರು ಯಾರೆಂದು ತಿಳಿಯಬಹುದು ಎಂದು ಕೋಚ್‌ ಐಗರ್‌ ಸ್ಟಿಮ್ಯಾಕ್‌ ಹೇಳಿದ್ದಾರೆ.
ಏಷ್ಯನ್‌ ಗೇಮ್ಸ್‌ ಸಪ್ಟೆಂಬರ್‌ 23ರಿಂದ ಅಕ್ಟೋಬರ್‌ 8ರ ವರೆಗೆ ನಡೆಯಲಿದೆ. ಕೋವಿಡ್‌ನಿಂದಾಗಿ ಈ ಕೂಟವನ್ನು ಮುಂದೂಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next