Advertisement

ಹಾನಗಲ್ಲ ಉಪಕದನ : ಕಾಂಗ್ರೆಸ್‌ ಅಭ್ಯರ್ಥಿ ಮಾನೆ ವಿರುದ್ಧ “ಬಂಡಾಯದಲೆ’ 

01:08 PM Oct 11, 2021 | Team Udayavani |

ಹಾನಗಲ್ಲ: ಹಾನಗಲ್ಲ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಮತ್ತೆ ಬಂಡಾಯದ ಅಲೆ ಎದ್ದಿದ್ದು, ಕಾಂಗ್ರೆಸ್ಸಿನ ಮುಂಚೂಣಿ ನಾಯಕರು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿ ಬಂಡಾಯದ ಬಾವುಟ ಹಾರಿಸಿದ್ದಾರೆ.

Advertisement

ಬಹುದಿನಗಳಿಂದ ಹಾನಗಲ್ಲಿನಲ್ಲಿ ಜನಹಿತ ರಕ್ಷಣಾ ವೇದಿಕೆ ಸ್ಥಾಪಿಸಿ ತಾಲೂಕಿನ ಜನರ ಮನಸ್ಸಿನಲ್ಲುಳಿದ ಕಾಂಗ್ರೆಸ್‌ ಟಿಕೆಟ್‌ ವಂಚಿತ ಬಿ.ಕೆ.ಮೋಹನಕುಮಾರ, ಇತ್ತೀಚೆಗೆ ಅವಿಶ್ವಾಸ ಮಂಡನೆಯಿಂದ ತಾಪಂ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ಸಿದ್ದಪ್ಪ ಹಿರಗಪ್ಪನವರ, ಮನೋಹರ ತಹಶೀಲ್ದಾರ ಬಣದಲ್ಲಿ ಗುರುತಿಸಿಕೊಂಡಿದ್ದ ಪುರಸಭೆ ಸದಸ್ಯ ನಜೀರಸಾಬ ಸವಣೂರ, ನ್ಯಾಯವಾದಿ ಸೋಮಶೇಖರ ಕೋತಂಬರಿ ಸೇರಿದಂತೆ 6 ಜನ ಕಾಂಗ್ರೆಸ್‌ ಮುಖಂಡರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಪಟ್ಟಣದ ನೂರ ಅರ್ಮಾನ ಹಾಲ್‌ನಲ್ಲಿ ಸ್ವಾಭಿಮಾನಿ ಕಾಂಗ್ರೆಸ್‌ ಬಳಗದ ಹೆಸರಿನಲ್ಲಿ ಸಭೆ ನಡೆಸಿದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗಳು, ನಾಮಪತ್ರ ಸಲ್ಲಿಸಿರುವ 8 ಜನರಲ್ಲಿ 7 ಜನ ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದು ಒಬ್ಬರನ್ನು ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ನಿರ್ಧರಿಸಿದ್ದಾರೆ.

ಶ್ರೀನಿವಾಸ ಮಾನೆ ಹಾನಗಲ್ಲ ತಾಲೂಕಿನಲ್ಲಿ ರಾಜಕೀಯ ಪ್ರವೇಶಿಸಿದ ನಂತರ ನಮ್ಮನ್ನು ಕಡೆಗಣಿಸಿದ್ದಾರೆ. ಇಂಥವರಿಗೆ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡುವ ಮೂಲಕ ನಮ್ಮನ್ನು ಅವಮಾನಿಸಲಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಬಂಡಾಯವಾಗಿ ನಾಮಪತ್ರ ಸಲ್ಲಿಸಿರುವ 8 ಜನರಲ್ಲಿ 7 ಜನ ನಾಮಪತ್ರ ವಾಪಸ್‌ ಪಡೆದು ಒಮ್ಮತದ ಅಭ್ಯರ್ಥಿಯನ್ನು ಕಣದಲ್ಲಿ ಉಳಿಸಿ ಚುನಾವಣಾ ಪ್ರಚಾರ ನಡೆಸಿ ಗೆಲ್ಲಿಸುತ್ತೇವೆ. ಎರಡು ದಿನಗಳಲ್ಲಿ ನಮ್ಮ ಅಭ್ಯರ್ಥಿ ಯಾರೆಂದು ಘೋಷಣೆ ಮಾಡುತ್ತೇವೆಂದು ಸ್ವಾಭಿಮಾನಿ ಕಾಂಗ್ರೆಸ್‌ ಬಳಗದ ನೇತೃತ್ವ ವಹಿಸಿಕೊಂಡಿರುವ ಜನಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ.ಮೋಹನಕುಮಾರ, ಬಂಡಾಯ ಅಭ್ಯರ್ಥಿ ಸೋಮಶೇಖರ ಕೋತಂಬರಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next