Advertisement

ಕಿಟಕಿಯಿಂದ ಕೈ ಹಾಕಿ ಮಹಿಳೆಯ ಸರ ಕಸಿದ

11:43 AM Mar 27, 2019 | Lakshmi GovindaRaju |

ಬೆಂಗಳೂರು: ಮಹಿಳೆಯೊಬ್ಬರು ನಿದ್ರಿಸುತ್ತಿರುವಾಗಲೇ ಕಿಟಕಿಯಿಂದ ಕೈ ತೂರಿಸಿದ ದುಷ್ಕರ್ಮಿಯೊಬ್ಬರ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತೂಯ್ದಿರುವ ಘಟನೆ ಕುಮಾರಸ್ವಾಮಿ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಈ ಕುರಿತು ಚಂದ್ರಾನಗರದ ನಿವಾಸಿ ಬೋರಮ್ಮ (62) ಎಂಬುವವರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದುಷ್ಕರ್ಮಿ ಬಂಧನಕ್ಕೆ ಬಲೆಬೀಸಿದ್ದಾರೆ. ರೇಶನ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಬೋರಮ್ಮ, ನೆಲಮಹಡಿಯ ಮನೆಯಲ್ಲಿ ಕಿಟಕಿ ಪಕ್ಕದಲ್ಲಿ ಮಂಚದ ಮೇಲೆ ಮಲಗಿಕೊಂಡಿದ್ದರು. ಬೇಸಿಗೆಯಾಗಿದ್ದರಿಂದ ಕಿಟಕಿ ತೆಗೆದಿದ್ದರು.

ಮಾ. 25ರಂದು ಮುಂಜಾನೆ 5 ಗಂಟೆ ಸುಮಾರಿಗೆ ಮನೆಯ ಸಮೀಪ ಬಂದಿರುವ ದುಷ್ಕರ್ಮಿ, ಕಿಟಕಿಯಿಂದ ಕೈ ತೂರಿಸಿ ಅವರ ಕತ್ತಿನಲ್ಲಿದ್ದ ಸುಮಾರು 35 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬೋರಮ್ಮ ಕಿರುಚಿಕೊಳ್ಳುತ್ತಲೇ ಕುಟುಂಬ ಸದಸ್ಯರು ಓಡಿಬರುವಷ್ಟರಲ್ಲಿ ದುಷ್ಕರ್ಮಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next